Spread the love

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮೈಸೂರಿನ ರಾಜೀವ ನಗರದಲ್ಲಿ ಮಾರ್ಚ್ 8ರಂದು ನಡೆದ ” ಮಹಿಳಾ ಹಕ್ಕುಗಳ ಸಮಾವೇಶ ” ವನ್ನು ಉದ್ದೇಶಿಸಿ ಕರ್ನಾಟಕ ಭೀಮ್ ಆರ್ಮಿಯ ರಾಜ್ಯ ಉಪಾಧ್ಯಕ್ಷೆ ತನಸ್ಸುಮ್ ಮಾತನಾಡಿ . ಮಹಿಳಾ ದಿನಾಚರಣೆಯ ಕೇವಲ ಒಂದು ಆಚರಣೆ ಆಗಿರಬಾರದು ಇದು ಒಂದು ಸಾಮಾಜಿಕ ಹೋರಾಟ ವಾಗಿರಬೇಕು . ನಮ್ಮ ಹಕ್ಕುಗಳನ್ನು ನಾವು ಪಡೆದುಕೊಳ್ಳುವಲ್ಲಿ, ನಮ್ಮ ಬದುಕನ್ನು ಕಟ್ಟಿಕೊಳ್ಳು ಶ್ರಮಿಸುವಂತಹ ದಿನವಾಗಬೇಕು . ಲಿಂಗಭೇದ ಗಳಾಚೆಗೆ , ಮೂಢನಂಬಿಕೆಗಳಿಂದಾಚೆಗೆ , ಹೆಣ್ಣು ಹೊರಬಂದು ಸ್ವತಂತ್ರವಾಗಿ ಸ್ವಾಭಿಮಾನದ ಬದುಕನ್ನು ಬದುಕಬೇಕು . ಹಿಂದೂ ಹೆಣ್ಣು ಇಷ್ಟೆಲ್ಲ ಶೋಷಣೆಯ ತುಳಿತಕ್ಕೆ ಒಳಗಾದರು ಕೂಡ ನಾವು ಅಂಜಿಕೊಳ್ಳಬಾರದು . ನಮಗೆ ತಲೆಯೆತ್ತಿ ಜೀವಿಸುವಂತೆ ಶಕ್ತಿ ಸಂವಿಧಾನ ಕಲ್ಪಿಸಿಕೊಟ್ಟಿದೆ ನಾವು ಅ ನಮ್ಮ ಭಾರತದ ಸಂವಿಧಾನಕ್ಕೆ ಕೃತಜ್ಞವಾಗಿರಬೇಕು. ಹೆಣ್ಣು ಸಂಸಾರದ ಚುಕ್ಕಾಣಿ ಮಾತ್ರವಲ್ಲ-ಆಕೆ ಸಮಾಜದ ಸಾರಥಿಯು ಹೌದು ಆಕೆಯ ಲಾಲನೆ-ಪಾಲನೆಯಲ್ಲಿ ಗಂಡ- ಮಕ್ಕಳು, ತಂದೆ – ತಾಯಿ ಅತ್ತೆ – ಮಾವ ಹೀಗೆ ಕುಟುಂಬವೇ ಹೆಣ್ಣನ್ನು ಆದರಿಸುತ್ತಿರುವುದರಿಂದ ಹೆಣ್ಣಾಗಿ ಹುಟ್ಟಿದ ನಾವು ಎಂದಿಗೂ ಹೆಮ್ಮೆ ಪಡುವಂತಹ ವಿಚಾರವಾಗಿದ್ದು ನಾವು ಹೆಣ್ತನಕ್ಕೆ ತಕ್ಕಂತೆ ಬದುಕಿ ಬಾಳಬೇಕು ಎಂದು ಹೇಳಿದರು.

ಈ ವೇಳೆ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಮಹಿಳಾ ಭಾರತ ಚಳುವಳಿ (WIM) ಅಧ್ಯಕ್ಷರಾದ ಶಾಹಿದ ತಸ್ನಿಂ, ಮೈಸೂರು ಜಿಲ್ಲಾಧ್ಯಕ್ಷರಾದ ಆಯುಷ್ಯ ಜುಬಿ, ಉಪನ್ಯಾಸಕರು ಮತ್ತು ಮಾಜಿ ಸಚಿವೆ ಡಾ. ಬಿ. ಟಿ. ಲಲಿತಾ ನಾಯಕ್ , ಎನ್ .ಡಬ್ಲ್ಯೂ .ಎಫ್ ಸದಸ್ಯೆ ಜಕಿಯಾ ಮಡಿಕೇರಿ, ಸುಶೀಲ , ನಿವೃತ್ತ ಪ್ರಾಂಶುಪಾಲರಾದ ಡಾ. ಪ್ರಮೀಳಾ ದೇವಿ ಬಿ.ಕೆ. , ಮತ್ತು ಮುಖ್ಯ ಅತಿಥಿಗಳಾದಂತಹ ಎಸ್.ಡಿ.ಪಿ.ಐ ರಾಜ್ಯಧ್ಯಕ್ಷ ಅಬ್ದುಲ್ ಮಜೀದ್ , ಉಚ್ಚ ನ್ಯಾಯಾಲಯದ ವಕೀಲರಾದಂತ ಅಡ್ವೋಕೇಟ್ ತಾಹಿರ್, ಇಸ್ಲಾಂ ಧಾರ್ಮಿಕ ಮುಖಂಡರು ಆದಂತಹ ಮೌಲನಾ ನೂರುದ್ದೀನ್ ಫಾರೂಕಿ ಭಾಗವಹಿಸಿದ್ದರು.


Spread the love