ಕರ್ನಾಟಕ ಪತ್ರಕರ್ತರ ಸಂಘ ದಿಂದ ಸಿರುಗುಪ್ಪ ತಾಲೂಕು ಅಧ್ಯಕ್ಷರಾಗಿ ಎಂ ಡಿ ಶೇಕ್ಷಾವಲಿ,ಉಪಾಧ್ಯಕ್ಷರಾಗಿ ಹೆಚ್ ಶೇಖರ್ ನಾಯಕ ಆಯ್ಕೆ.
————————————————-
ಸಿರುಗುಪ್ಪ ನಗರದ ಜಿ ಎಸ್ ಲಾಡ್ಜ್.
ದಿನಾಂಕ 01.04.2022 ಶುಕ್ರವಾರ .
ತಾಲೂಕಿನ 40 ಜನ ಸಮಾನಮನಸ್ಕ ಪತ್ರಕರ್ತರು ಸಭೆ ಸೇರಿದ್ದರು.
ಆ ಸಭೆಯಲ್ಲಿ ಮೊದಲು ಕರ್ನಾಟಕ ಪತ್ರಕರ್ತರ ಸಂಘಕ್ಕೆ ಸದಸ್ಯತ್ವವನ್ನು ಪಡೆದು ನಂತರ ಸಂಘ ದ್ಯೆಯೋದ್ದೇಶ ಹಾಗೂ ಸಂಘದ ಚಟುವಟಿಕೆಗಳ ಬಗ್ಗೆ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಯುತ ಮುರುಗೇಶ್ ಶಿವಪೂಜೆ ಅವರ ಸೂಚನೆಯ ಮೇರೆಗೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಗೋಪಾಲ್.ಕೆ. ಹಾಗೂ ಬಳ್ಳಾರಿ ಜಿಲ್ಲಾ ಸಂಘಟನಾ ಸಂಚಾಲಕರಾದ ಬಿ. ಮಹೇಶ್ ಬಾಗವಹಿಸಿದ್ದರು.
ಸಿರುಗುಪ್ಪ ತಾಲ್ಲೂಕಿನ ಅಧ್ಯಕ್ಷರು ಹಾಗೂ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದಕೆ.ಗೋಪಾಲ್ ಇ ವರುಗಳು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಈ ಸಂಘವು ರಾಷ್ಟ್ರೀಯ ಹಾಗೂ ರಾಜ್ಯದ ಮಾನ್ಯತೆಯನ್ನು ಪಡಿದಿರುತ್ತದೆ. ಬೇರೆ ಬೇರೆ ಸಂಘಗಳಂತೆ ಬರಿ ಪತ್ರಕರ್ತರಾದವರಿಗೆ ಮಾತ್ರ ಗುರುತಿನ ಪತ್ರ (ಮೀಡಿಯಾ ಕಾರ್ಡ್) ನೀಡದೆ ಪತ್ರಿಕೆಗಳನ್ನು ಹಂಚುವವರಿಗೆ. ಪತ್ರಿಕೆಗಳ ಏಜಂಟರುಗಳಿಗೂ ನೀಡುವ ಸೌಲಭ್ಯ ಈ ಕರ್ನಾಟಕ ಪತ್ರಕರ್ತರ ಸಂಘದಲ್ಲಿ ಇದೆ.
ರಾಜ್ಯದಲ್ಲಿ ಪ್ರಮುಖವಾಗಿ ಗ್ರಾಮೀಣ ಬಾಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಸದಾಕಾಲ ಸಭೆ ಸಮಾರಂಭಗಳೆಂದು ಓಡಾಡುವ ಪತ್ರಕರ್ತರು ಅನೇಕ ಬಾರಿ ಅಪಘಾತಗಳಿಗೆ ಒಳಗಾಗಿ ಎಷ್ಟೋ ಬಾರಿ ಚಿಕಿಸ್ಥೆಗೆ ಹಣ ಇಲ್ಲದೆ ಪರದಾಡುವ ಸ್ಥಿತಿ ಎದುರಿಸುತ್ತಾರೆ ಎಷ್ಟೋ ಬಾರಿ ಸಮಾಜ ಕಂಟಕರಿಂದ ಹಲ್ಲೆಗೆ ಒಳಗಾಗುತ್ತಾರೆ ಅಂಥವರಿಗೆ ಸಹಾಯವಾಗಲೆಂದು ಸಂಘವು ಸದಸ್ಯ ಪತ್ರಕರ್ತರಿಗೆ ಎರಡು ಲಕ್ಷ ರೂಪಾಯಿಗಳ ಜನತಾ ಅಪಘಾತ ವಿಮಾ ಸೌಲಭ್ಯವನ್ನು ಕಳೆದ ಹಲವಾರು ವರ್ಷಗಳಿಂದ ನೀಡಲಾಗುತ್ತಿದೆ ಅಪಘಾತದಿಂದ ನಿಧನರಾಗುವ ಸದಸ್ಯರ ಸಂಬಂಧಿಕರಿಗೆ 2 ಲಕ್ಷ ರೂ. ಮತ್ತು ಅಪಘಾತದಿಂದ ಆಸ್ಪತ್ರೆಗೆ ದಾಖಲಾಗುವ ಸದಸ್ಯರಿಗೆ ಗರಿಷ್ಠ 35 ಸಾವಿರ ರೂ.ಗಳ ಚಿಕಿತ್ಸೆ ವೆಚ್ಚವನ್ನು ನೀಡಲಾಗುತ್ತಿದೆ.
ಈ ಯೋಜನೆ ನಮ್ಮ ಸಂಘದಲ್ಲಿ ಮಾತ್ರ ಇದೆ ಈ ಸೌಲಭ್ಯದ ಲಾಭವನ್ನು ವಿವಿಧ ಜಿಲ್ಲೆಗಳ ಪತ್ರಕರ್ತರು ಪಡೆದುಕೊಂಡಿದ್ದಾರೆ.ಇದಲ್ಲದೆ ವಿವಿಧ ಜಿಲ್ಲೆಗಳ ಎಂಟು ಸದಸ್ಯರು ಸೇರಿ ಪತ್ರಕರ್ತರಿಗಾಗಿ “ಕರ್ನಾಟಕ ಜರ್ನಲಿಸ್ಟ್ ಯೂನಿಯನ್” ಟ್ರಸ್ಟ್ (ಇಂಡಿಯನ್ ಟ್ರಸ್ಟ್ ಕಾಯಿದೆ) ಒಂದನ್ನು ಸ್ಥಾಪಿಸಿ ತಮ್ಮ ಸ್ವಂತ (ಟ್ರಸ್ಟಿ ಗಳಿಂದ ವೈಯಕ್ತಿಕ ವಂತಿಕೆ) ಹಣವನ್ನು ಒಂದು ನಿಧಿ ಮಾಡಿ ಫಿಕ್ಸ್ ಡಿಪಾಸಿಟ್ ಮಾಡಲಾಹಿತು ಪ್ರತಿ ವರ್ಷ ಈ ನಿಧಿಯಿಂದ ಬರುವ ಬಡ್ಡಿ ಹಣವನ್ನು ಮಾತ್ರ ಕಷ್ಟದಲ್ಲಿರಿವ ಪತ್ರಕರ್ತರಿಗೆ ಸಹಾಯ ಮಾಡುವ ಕಾರ್ಯವನ್ನು ಹಲವಾರು ವರ್ಷಗಳಿಂದ ನಡೆಸಲಾಗುತ್ತಿದೆ ಪ್ರತಿವರ್ಷ ಈ ಟ್ರಸ್ಟ್ ಮೂಲ ನಿಧಿಯನ್ನು ಬಳಸದೆ ಬಡ್ಡಿ ಹಣವನ್ನು ಮಾತ್ರ ಅತಿ ಅಗತ್ಯ ಇರುವ ಪತ್ರಕರ್ತರಿಗೆ. ಹಿರಿಯ ಪತ್ರಕರ್ತರ ಚಿಕೆತ್ಸೆ ಮತ್ತು ಅಕಾಲ ಮರಣಕ್ಕೆ ತುತ್ತಾಗುವ ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ಕನಿಷ್ಠ ಸಹಾಯ ಮಾಡುವ ಕಾರ್ಯಕ್ಕೆ ಬಳಸಲಾಗುತ್ತಿದೆ.
ಪತ್ರಕರ್ತರಿಗೆ ಸಾಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ “ಕರ್ನಾಟಕ ಪತ್ರಕರ್ತರ ವಿವಿದ್ದೋದ್ದೇಶಗಳ ಸಹಕಾರಿ ಸಂಘ” ಒಂದನ್ನು ಮೂರು ವರ್ಷಗಳ ಹಿಂದೆ ಸ್ಥಾಪಿಸಲಾಹಿತು.500 ಕ್ಕೂ ಅಧಿಕ ಸದಸ್ಯರನ್ನು ಹೊಂದಿರಿವ ಈ ಸಂಘವು ಸದ್ಯಕ್ಕೆ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಶೀಘ್ರದಲ್ಲೇ ಗದಗ.ಬಳ್ಳಾರಿ.ಮಂಗಳೂರು. ಚಿಕ್ಕಮಂಗಳೂರು. ಜಿಲ್ಲೆಗಳಲ್ಲಿಯೂ ತನ್ನ ಕಾರ್ಯ ಆರಂಭಿಸುವ ಯೋಜನೆ ಹೊಂದಿದೆ.
ಪತ್ರಕರ್ತರು ತಮ್ಮ ಪತ್ರಿಕೆಗಳಲ್ಲಿ ದೈನಂದಿನ ವರದಿಗಳನ್ನು ಸಿದ್ಧಪಡಿಸಲು ಕಿ.ಮೀ.ಗಟ್ಟಲೆ ಸ್ವಂತ ಸ್ಥಳದಿಂದ ಹೋಗಬೇಕಾಗುತ್ತದೆ. ಆ ಕಾರಣಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪತ್ರಕರ್ತರಿಗೆ ಉಚಿತವಾಗಿ ಬಸ್ ಪಾಸ್ ಮತ್ತು ರೈಲು ಪಾಸ್ ಸೌಲಭ್ಯಗಳ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.ಇನ್ನು ಕೆಲ ದಿನಗಳಲ್ಲಿ ಅದು ಸಹ ಈ ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರಿಗೆ ಸಿಗುವುದು ಖಚಿತ.
ಆ ದಿನದ ಸಭೆಯಲ್ಲಿ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು ಸ್ಥಳೀಯ ಎಲ್ಲ ಪತ್ರಕರ್ತರ ಒಮ್ಮತದ ಮೇರೆಗೆ ಮೊದಲಿಗೆ ನಗರ ಘಟಕದ ಅಧ್ಯಕ್ಷರಾಗಿ ಎಂ. ಡಿ. ಶೇಕ್ಷವಾಲಿ ಇವರನ್ನು ಕರ್ನಾಟಕ ಪತ್ರಕರ್ತರ ಸಂಘ ಕ್ಕೆ ಆಯ್ಕೆ ಮಾಡಲಾಯಿತು. ಇವರನ್ನು ಸರ್ವ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಆಯ್ಕೆ ಮಾಡಲಾಯಿತು.
ಇದಕ್ಕೆ ಸಭೆಯಲ್ಲಿ ಎಲ್ಲರು ಒಕ್ಕೊರಲಿನ ಸಹಮತ ವ್ಯಕ್ತಪಡಿಸಿದರು. ಈ ವೇಳೆ ಪತ್ರಕರ್ತರಾದ ರಾಜೀವ್ ಐರಣಿ, ರಮೇಶ್ ಉಪ್ಪರ್, ಮೆಹಬೂಬ್ ಬಾಷಾ, ಆಲಂ ಭಾಷಾ, ಅಜೀಂ ಹಾಗೂ ಇತರರು ಹಾಜರಿದ್ದರು.
ಎಂ. ಡಿ. ಶೆಕ್ಷವಲಿ
ಅಧ್ಯಕ್ಷರು.
ಸಿರುಗುಪ್ಪ ತಾಲೂಕ ಘಟಕ.
ದುರುಗಪ್ಪ ತುಪ್ಪದ. ಗೌರವಾಧ್ಯಕ್ಷರು.
H. ಶೇಖರ್ ನಾಯಕ ಉಪಾಧ್ಯಕ್ಷರು.
H.ಉಮೇಶ್ ಕೆಂಚನಗುಡ್ಡ ಪ್ರದಾನ ಕಾರ್ಯದರ್ಶಿ.
ಮಹಾದೇವ. – ಖಜಾಂಚಿ.
H M ಮಲ್ಲೇಶ್ವರ : ಸಂಘಟನಾ ಕಾರ್ಯದರ್ಶಿ.
T. ಭಾಸ್ಕರ್: ಹಿರಿಯ ಸಲಹೆಗಾರರು
Y. ಹುಸೇನಪ್ಪ ನಾಯಕ ರಾಂಪುರ. ಕಾರ್ಯ ಅಧ್ಯಕ್ಷರು.
H.ವೀರೇಶ- ಸದಸ್ಯರು.
ಎಂ. ಪವನ ಕುಮಾರ್- ಸದಸ್ಯರು.
ರಮೇಶ್.- ಸದಸ್ಯರು.
ಇನ್ನುಳಿದ ತಾಲೂಕುಗಳಿಗೆ ಸಂಘದ ಸದಸ್ಯರನ್ನು ಮಾಡಿಕೊಳ್ಳಲು ಜಿಲ್ಲಾಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರುಗಳಿಗೆ ಸೂಚನೆಯನ್ನು ನೀಡಿದರು.
ವರದಿ
ಹೆಚ.ಮಲ್ಲೇಶ್ವರ ಬಳ್ಳಾರಿ ಜಿಲ್ಲಾ ರಿಪೋರ್ಟರ್