ಪ್ರತಿಭಟನೆ 3: ಪುಟ್ಟೇನಹಳ್ಳಿ : ಎಸ್.ಪಿ.ಶೋಭಾ ಕಟಾವ್ಕರ್ (53) ಪುಟ್ಟೇನಹಳ್ಳಿಯ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ.
ಈ ವೇಳೆ ಮನೆಯ ಸದಸ್ಯರೆಲ್ಲರೂ ಹಾಸನಕ್ಕೆ ತೆರಳಿದ್ದು, ಮನೆಯಲ್ಲಿ ಶೋಭಾ ಕಟಾವ್ಕರ್ ಒಬ್ಬರೇ ಇದ್ದರು. ಇನ್ನು ಹಾಸನಕ್ಕೆ ತೆರಳಿದ ಮನೆಯವ್ರು ರಾತ್ರಿ 8 ಗಂಟೆ ಸುಮಾರಿಗೆ ಶೋಭಾಯವ್ರಿಗೆ ಫೋನ್ ಮಾಡಿದ್ದು, ಅವ್ರು ಉತ್ತರಿಸಿಲ್ಲ. ಹಾಗಾಗಿ ಸೆಕ್ಯುರಿಟಿಗೆ ಪರಿಶೀಲಿಸಲು ಸೂಚಿಸಿದ್ದಾರೆ. ಆಗ ಸಾವನ್ನಪ್ಪಿರುವುದು ಪತ್ತೆಯಾಗಿದೆ.
ಅಂದ್ಹಾಗೆ, ಎಸ್.ಪಿ ಶೋಭಾ ಕಲಬುರಗಿಯ ಪಿಟಿಸಿ ಉಪ ಪ್ರಾಂಶುಪಾಲರಾಗಿ ನಿಯೋಜನೆಗೊಂಡಿದ್ದರು. ಇತ್ತೀಚಿಗೆ ಎಸ್.ಪಿಯಾಗಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿದ್ದ ಶೋಭಾ, ಹೃದಯಾಘಾತದಿಂದ ಸಾವನ್ನಪ್ಪಿರಬೋದು ಎಂದು ಶಂಕಿಸಲಾಗ್ತಿದ್ರೂ, ಪುಟ್ಟೇನಹಳ್ಳಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಹಾಗೂ ಹೆಚ್ಚಿನ ವಿಷಯಗಳು ತನಿಖೆಯಲ್ಲಿ ಇದೆ.