Spread the love

ತುಮಕೂರು_ಅಲಹಬಾದ್ ರಾಂಚಿ ಹಾಗೂ ಉತ್ತರಪ್ರದೇಶದಲ್ಲಿ ಸರ್ಕಾರದ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದ ಒಂದು ಸಮುದಾಯವನ್ನು ಅಲ್ಲಿನ ಸರ್ಕಾರ ಟಾರ್ಗೆಟ್ ಮಾಡಿದ್ದು ಅ ಮೂಲಕ ಸರ್ಕಾರದ ನಡೆಯನ್ನು ಹಾಗೂ ವೈಫಲ್ಯವನ್ನು ಖಂಡಿಸುವ ಮುಖಂಡರ ದ್ವನಿಯನ್ನ ಅಡಗಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ ಹಾಗಾಗಿ ಉತ್ತರಪ್ರದೇಶ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ತಾಜುದ್ದಿನ್ ಷರೀಫ್ ಮಾತನಾಡಿದ್ದು ಅಲಹಾಬಾದ್ ರಾಂಚಿ ಹಾಗೂ ಉತ್ತರಪ್ರದೇಶದಲ್ಲಿ ಕಾನೂನಿಗೆ ವಿರುದ್ಧವಾಗಿ ಸರ್ಕಾರ ನಡೆಯುತ್ತಿದ್ದು ಎನ್.ಆರ್. ಸಿ ಸಿಎಎ ಹೋರಾಟದಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರನ್ನು ಸರ್ಕಾರ ಟಾರ್ಗೆಟ್ ಮಾಡಿ ಅಂತವರನ್ನು ಬಂಧನ ಮಾಡುವ ಮೂಲಕ ಹೋರಾಟಗಾರರು ಪ್ರಗತಿಪರರು ಹಾಗೂ ಸಮಾಜಸೇವಕರು ಗಳ ಹೋರಾಟವನ್ನು ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಈ ಮೂಲಕ ಅವರ ಆಸ್ತಿಗಳನ್ನು ದ್ವಂಸಗೊಳಿಸಿ ಮುಟ್ಟುಗೋಲು ಹಾಗಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು ಇಂತಹ ಘಟನೆ ಕಾನೂನಿಗೆ ವಿರುದ್ಧವಾಗಿದ್ದು ಕೂಡಲೇ ರಾಷ್ಟ್ರಪತಿಗಳು ಉತ್ತರಪ್ರದೇಶ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಇನ್ನು ಉತ್ತರಪ್ರದೇಶದಲ್ಲಿ ಜಾವಿದ್ ಹಾಗೂ ಆಫ್ರೀನ್ ಫಾತಿಮಾ ಅವರನ್ನು ಸರ್ಕಾರ ಅಕ್ರಮವಾಗಿ ಬಂಧಿಸಿದ್ದು ಯಾವುದೇ ನೋಟಿಸ್ ನೀಡದೆ ಅವರ ಮನೆ ಮೇಲೆ ಬುಲ್ಡೋಜರ್ ಗಳನ್ನು ನುಗ್ಗಿಸಿ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಿದೆ ಹಾಗಾಗಿ ಉತ್ತರಪ್ರದೇಶ ಸರ್ಕಾರ ಒಂದು ಧರ್ಮದ ವಿರುದ್ಧ ನಡೆದುಕೊಳ್ಳುತ್ತಿದ್ದ ಅಲ್ಲಿನ ಜನರು ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತುಮಕೂರು ಜಿಲ್ಲೆ ಪಾರ್ಟಿ ಆಫ್ ಇಂಡಿಯಾ ಘಟಕ ಒತ್ತಾಯಿಸಿತು. ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಘಟಕದ ಕಾರ್ಯದರ್ಶಿ ಅಫ್ಜಲ್ ಪಾಷಾ ಗುಲ್ಜಾರ್ ಅಹಮದ್ ಶಕೀರ್ ಅಹ್ಮದ್ ಸೇರಿದಂತೆ ಹಲವರು ಹಾಜರಿದ್ದರು.


Spread the love