Spread the love

ತುಮಕೂರು: ದಲಿತ ವಿದ್ಯಾರ್ಥಿ ಪರಿಷತ್ ( DVP ) ದಿನಾಂಕ 21 – 02 – 2022 ರಂದು ವಿವಿಧ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಮರು ಪರೀಕ್ಷೆಗೆ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದು ಮನವಿಯನ್ನು ಸ್ವೀಕರಿಸಿದ ವಿಶ್ವವಿದ್ಯಾಲಯದ ಅಧಿಕಾರಿಗಳು ಮೇ 17 ರಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಅದನ್ನು ಪ್ರಸ್ತಾಪಿಸಿ ವಿವಿಧ ಪದವಿ, ಸ್ನಾತಕೋತ್ತರ 2005ರಿಂದ ಫೇಲಾದ ವಿದ್ಯಾರ್ಥಿಗಳಿಗೆ, ಅನುಮೋದನೆ ನೀಡಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.

ವಿವಿಧ ಸ್ನಾತಕ ಪದವಿ, ಸ್ನಾತಕ ಶಿಕ್ಷಣ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿ 2005ನೇ ಶೈಕ್ಷಣಿಕ ವರ್ಷದಿಂದ ಫೇಲಾಗಿರುವ ವಿದ್ಯಾರ್ಥಿಗಳಿಗೆ 2021-22ನೇ ಶೈಕ್ಷಣಿಕ ವರ್ಷದಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಡಲಾಗಿದೆ. ಕಳೆದ ತಿಂಗಳ ಜೂನ್ 8 ನೇ ತಾರೀಖಿನಿಂದ ಪರೀಕ್ಷೆಯ ಶುಲ್ಕವನ್ನು ಎಲ್ಲ ಸ್ಥಳೀಯ ಪದವಿ ಕಾಲೇಜುಗಳಲ್ಲಿ ಪಾವತಿ ಮಾಡಿಕೊಳ್ಳುತ್ತಿದ್ದು ಇದೆ ತಿಂಗಳ ಜುಲೈ 16 ದಂಡ ರಹಿತ ಶುಲ್ಕ ಪಾವತಿಗೆ ಅವಕಾಶವಿದ್ದು ದಂಡ ಸಹಿತ ಶುಲ್ಕ ಪಾವತಿಗೆ ಜುಲೈ 25 ರವರಿಗೆ ಅವಕಾಶ ವಿಸ್ತರಿಸಲಾಗಿದೆ ತದನಂತರದ ಬಂದ ಅರ್ಜಿಗಳನ್ನು ವಿಶ್ವವಿದ್ಯಾನಿಲ ಸೀಕೃತ ಮಾಡಿಕೊಳ್ಳುವುದನ್ನು ತಿರಸ್ಕರಿಸಿದ್ದು ವಿದ್ಯಾರ್ಥಿಗಳು ಆದಷ್ಟು ಇದರ ಸದುಪಯೋಗವನ್ನು ಪಡೆದುಕೊಂಡು ಮುಂಚಿತವಾಗಿಯೇ ಪರೀಕ್ಷಾ ಶುಲ್ಕವನ್ನು ಪಾವತಿಸಿ ಪರೀಕ್ಷೆಗೆ ಸಜ್ಜುಗಾಬೇಕೆಂದು ತುಮಕೂರು ಜಿಲ್ಲಾ ವಿದ್ಯಾರ್ಥಿ ಪರಿಷತ್ ಮೂಲಕ ತುಮಕೂರು ಜಿಲ್ಲಾ DVP ಸಂಚಾಲಕರಾದ ಅಜಿತ್ ಕುಮಾರ್ ಬಿ ಓಬಯ್ಯ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದೆ.


Spread the love