ತುಮಕೂರು: ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಒಂದನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪಿಡಿಒಗಳ ದರ್ಪ ದೌಲತ್ತಿನ ಬಗ್ಗೆ ಚರ್ಚೆ ನಡೆಯಿತು.ಚರ್ಚೆಯಲ್ಲಿ ತುರುವೇಕೆರೆ ಶಾಸಕ ಮಸಾಲ ಜಯರಾಂ ಪಿಡಿಒಗಳ ವರ್ತನೆ ಕುರಿತು ಮಾತನಾಡಿ, ಪಿಡಿಒ ಗಳು ಇಒ ಗಳನ್ನ ಕಂಟ್ರೋಲ್ ಮಾಡ್ತಿದ್ದಾರೆ.
ಆದರೆ, ಇಒ ಗಳು ಯಾರು ಈ ಬಗ್ಗೆ ಮಾತನಾಡುವುದಿಲ್ಲ, ಪಿಡಿಒಗಳು ಹೇಳಿದಂತೆ ಅವರ ತಾಳಕ್ಕೆ ತಕ್ಕಂತೆ ಇಒಗಳು ಕುಣಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಧ್ವನಿಗೂಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಕೆಲ ಪಿಡಿಒಗಳು ಆ ರೀತಿ ಮಾಡುತ್ತಾರೆ. ಪಂಚಾಯ್ತಿ ಅಧ್ಯಕ್ಷರು ರಿಸರ್ವೇಷನ್ನಲ್ಲಿ ಬಂದ್ರೆ ಅವರನ್ನ ಕೇಳೋರೆ ಗತಿ ಇರಲ್ಲ.
ಅಧ್ಯಕ್ಷರು ಬೆಲ್ ಮಾಡಿದಾಗ ಪಿಡಿಒ ಅಧ್ಯಕ್ಷರ ಚೇಂಬರ್ಗೆ ಹೋಗ್ಬೇಕೋ ಬೇಡ್ವೋ ಅನ್ನೋದರ ಬಗ್ಗೆ ಚರ್ಚೆಯಲ್ಲಿ, ” ಬೆಲ್ ಮಾಡಿದಾಗ ನಾನ್ಯಾಕೆ ಹೋಗ್ಬೇಕು ಅಂತ ಪಿಡಿಒ ಹೇಳ್ತಾರಂತೆ “, ಈ ಬಗ್ಗೆ ” ಒಬ್ಬ ಎಸ್ಸಿ ಮಹಿಳಾ ಗ್ರಾ.ಪಂ ಅಧ್ಯಕ್ಷೆ ನನ್ನಲ್ಲಿ ಅಳಲು ತೋಡಿಕೊಂಡಿದ್ದಾರೆ. ಪಿಡಿಒ ಕರೆದರೆ ಬರಲ್ಲ ಅಂತೇಳಿ, ಮೊದಲಿಗೆ ನಾನೇ ಪಿಡಿಒ ಚೇಂಬರ್ಗೆ ಹೋಗ್ತಿದ್ದೆ, ಎಲ್ಲರೂ ಹೇಳಿದ್ರು ನೀವೇಕೆ ಅವರ ಚೇಂಬರ್ ಗೆ ಹೋಗ್ತಿಯಾ ನೀನೇ ಅವರನ್ನ ಕರೆಸಿಕೋ ಅಂತ ಹೇಳಿದ್ರು “.
ಆದರೆ, ನಾ ಈಗ ಬೆಲ್ ಮಾಡಿದ್ರೂ ಪಿಡಿಒ ಬರಲ್ಲ. ಸಿಎಂ ಬೊಮ್ಮಾಯಿ ಬೆಲ್ ಮಾಡಿದರೆ ಅವರ ಚೀಪ್ ಸೆಕ್ರೇಟರಿ ಚೇಂಬರ್ಗೆ ಹೋಗ್ತಾರೆ ತಾನೇ. ಹಾಗೆ ಒಬ್ಬ ಚೇರ್ಮನ್ಗೆ ಗೌರವ ಕೊಡಲು ಬಾರದ ಪಿಡಿಒಗಳ ತಲೆಯಲ್ಲಿ ಏನೋ ತುಂಬಿಕೊಂಡಿದ್ದಾರೆ. ಇವರು ಪೂರ್ತಿ ತಿಳಿದು ಕೊಂಡಿಲ್ಲ, ಇವರು ಅರ್ಧಂಬರ್ಧ ತಿಳಿದುಕೊಂಡಿದ್ದಾರೆ. ಕಾನೂನು ನೆಪ ಹೇಳಿ ಕೆಲಸ ಮಾಡದೇ ಸುಮ್ಮನೆ ಕೂರ್ತಾರೆ ಎಂದು ಗೃಹ ಸಚಿವರು ಅಲ್ಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇನ್ನು ಮುಂದುವರಿದು ಚರ್ಚೆಯಲ್ಲಿ ಶಾಸಕ ಮಸಾಲ ಜಯರಾಮ್ ಮಾತನಾಡಿ, ಸಂಜೆ ಆರು ಗಂಟೆ ಆದಮೇಲೆ ಸೆಕ್ರೆಟರಿ ಬಿಲ್ ಕಲೆಕ್ಟರ್ನ , ಅಧ್ಯಕ್ಷರನ್ನ ಕೂರಿಸಿಕೊಂಡು ರೆಸಾರ್ಟ್ನಲ್ಲಿ ಮಜಾ ಮಾಡ್ತಾರೆ, ಇನೋವಾ ಕಾರಿನಲ್ಲಿ ಓಡಾಡ್ತಾರೆ ಎಂದು ಗಂಭೀರ ಆರೋಪ ಮಾಡಿದರು. ಈ ವೇಳೆ ತುರುವೇಕೆರೆ ಇಒ ಸತೀಶ್ ಕುಮಾರ್ಗೆ ಸಚಿವ ಆರಗ ಜ್ಞಾನೇಂದ್ರ ಕಾರ್ಯವೈಖರಿಯ ಎಚ್ಚರ ವಹಿಸುವಂತೆ . ಹಾಗೂ ಪಿಡಿಒಗಳ ಮೇಲೆ ಕ್ರಮ ತೆಗೆದು ಕೊಳ್ಳುವಂತೆ ಇಒಗೆ ಫುಲ್ ಕ್ಲಾಸ್ ತೆಗೆದುಕೊಂಡ್ರು.