ಭೋಪಾಲ್: ಮಧ್ಯಪ್ರದೇಶದಲ್ಲಿ ಹೆದ್ದಾರಿಯನ್ನು ಕಳಪೆಯಾಗಿ ಕಾಮಗಾರಿಗಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಾರ್ವಜನಿ ಕರಲ್ಲಿ ಕ್ಷಮೆಯಾಚಿಸಿದ್ದಾರೆ ಮತ್ತು ಯೋಜನೆಗೆ ಹೊಸ ಗುತ್ತಿಗೆಗೆ ಆದೇಶ ನೀಡಿದ್ದಾರೆ. ʻಬರೇಲಾದಿಂದ ಮಂಡ್ಲಾವರೆಗಿನ 63 ಕಿ.ಮೀ ಉದ್ದದ ರಸ್ತೆಯನ್ನು ಸುಮಾರು ₹ 400 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದ್ರೆ, ಈ ನಿರ್ಮಾಣ ನನಗೆ ತೃಪ್ತಿ ತಂದಿಲ್ಲ. ಇದ್ರಿಂದ ನನಗೆ ನೋವಾಗಿದೆ. ತಪ್ಪಾಗಿದ್ದರೆ ಕ್ಷಮೆಯಾಚಿಸಲು ನಾನು ಹಿಂಜರಿಯುವುದಿಲ್ಲ ಎಂದು ಗಡ್ಕರಿ ಅವರು ಹೇಳಿದ್ದಾರೆ.
ಇಲ್ಲಿ ಅನೇಕ ಸಮಸ್ಯೆಗಳಿವೆ ಮತ್ತು ನಿಮ್ಮಲ್ಲಿ ಅನೇಕರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿಗೆ ಬರುವ ಮುನ್ನ ನನ್ನ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಯಾವ ಕೆಲಸ ಬಾಕಿ ಇದೆ ಎಂಬ ಬಗ್ಗೆ ಚರ್ಚೆ ಮಾಡಿ ಎಂದು ಹೇಳಿದ್ದೇನೆ. ಪರಸ್ಪರ ಒಮ್ಮತದ ನಂತರ ಯೋಜನೆಯನ್ನು ಸ್ಥಗಿತಗೊಳಿಸಿ ಹಳೆ ಕಾಮಗಾರಿ ದುರಸ್ತಿಗೊಳಿಸಿ, ಹೊಸ ಟೆಂಡರ್ ಕರೆದು ಶೀಘ್ರವೇ ಉತ್ತಮ ರಸ್ತೆ ವಿತರಿಸಬೇಕು. ನೀವು ಇಲ್ಲಿಯವರೆಗೆ ಏನನ್ನು ಎದುರಿಸಿದ್ದೀರೋ, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಗಡ್ಕರಿ ಹೇಳಿದ್ದಾರೆ.