Spread the love

ಹಮದಾಬಾದ್- ರೈಲಿನಲ್ಲಿ ಅನೇಕ ಬಾರಿ ಕಳ್ಳತನಗಳಾಗಿದ್ದು ಕೆಲವೊಮ್ಮೆ ಕಳ್ಳರು ಸಿಕ್ಕಾಕಿಕೊಂಡಿರೋದು ಇದೆ. ಇದೀಗ ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ಕಳ್ಳತನವಾಗಿದೆ. ಚಿನ್ನಾಭರಣ ಕಳ್ಳತನವಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಹೌದು, ಮಧ್ಯಪ್ರದೇಶದ ಭೋಪಾಲ್‌ನ ಜಿಇಬಿ ರಸ್ತೆಯ ನವನಿಧಿ ಎಲಿಗೆನ್ಸ್‌ ನಿವಾಸಿಯಾಗಿರುವ ಪರೇಶ್ ಸೊನಾನಿ ಎಂಬುವವರ ಆಭರಣ ಕಳ್ಳತನವಾಗಿದೆ. ಸುಮಾರು ಆರು ಲಕ್ಷ ಮೌಲ್ಯದ್ದು ಎಂದು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಇನ್ನು ಇವರು ನೀಡಿರುವ ದೂರಿನಲ್ಲಿ ಮನೆಯಿಂದ ಹೊರಟ ನಂತರ ಬಿಆರ್‌ಟಿಎಸ್ ಬಸ್‌ನಲ್ಲಿ ಸಂಚಾರ ಮಾಡಿ, ಇಸ್ಕಾನ್ ಕ್ರಾಸ್‌ ರೋಡ್‌ ಗೆ ತೆರಳಿ, ಅಲ್ಲಿಂದ ಕಾಲುಪುರ್ ರೈಲ್ವೆ ಸ್ಟೇಷನ್‌ಗೆ ಎಎಂಟಿಎಸ್ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ.

ನಂತರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಹತ್ತಿದ್ದಾರೆ. ತಮ್ಮ ಸೀಟ್‌ನಲ್ಲಿ ಕುಳಿತ ಬಳಿಕ ಸೀಟ್ ಪಕ್ಕದಲ್ಲಿ ಬ್ಯಾಗ್ ಇಟ್ಟಿದ್ದೆ. ಆದರೆ ಕೆಲ ಹೊತ್ತಿನಲ್ಲಿ ಆ ಬ್ಯಾಗ್ ನಾಪತ್ತೆಯಾಗಿದೆ. ಅದರಲ್ಲಿ 6 ಲಕ್ಷ ರೂ. ಮೌಲ್ಯದ ಆಭರಣ ಇತ್ತು ಎಂದು ದೂರಿನಲ್ಲಿ ಹೇಳಿದ್ದಾರೆ. ಇನ್ನು ಬ್ಯಾಗ್ ಕಾಣೆಯಾದ ತಕ್ಷಣ ಒಂದು ಕ್ಷಣ ಕಂಗಾಲಾದ ಪರೇಶ್, ರೈಲ್ವೆ ಪೊಲೀಸರನ್ನು ಸಂಪರ್ಕಿಸಿ, ಅಪರಿಚಿತ ವ್ಯಕ್ತಿ ವಿರುದ್ಧ ಕಳವು ದೂರು ದಾಖಲಿಸಿದ್ದಾರೆ. ಇನ್ನು ಸಿಸಿ ಟಿವಿ ಮೂಲಕ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ‌.


Spread the love