ರಾಜಸ್ಥಾನದ ಸಿರೋಹಿಯಲ್ಲಿ ಪತಿಯ ಎದುರೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನ. 9 ರಂದು ರಾತ್ರಿ 45 ವರ್ಷದ ಮಹಿಳೆಯೊಬ್ಬಳು ತನ್ನ ಗಂಡನ ಮುಂದೆ ನಾಲ್ವರು ವ್ಯಕ್ತಿಗಳಿಂದ ಅತ್ಯಾಚಾರವೆಸಗಿದ್ದಾರೆ. ದಂಪತಿಗಳ ಪ್ರಕಾರ, ನಾಲ್ವರು ದರೋಡೆ ಮಾಡುವ ಉದ್ದೇಶದಿಂದ ಅವರ ಮನೆಗೆ ನುಗ್ಗಿದ್ದರು. ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ನಿನ್ನೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ಕನೇ ಆರೋಪಿ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ.
ಉಪ ಪೊಲೀಸ್ ವರಿಷ್ಠಾಧಿಕಾರಿ(ಪಿಂಡ್ವಾರಾ) ಜೇತು ಸಿಂಗ್, ದಂಪತಿ ಮಲಗಲು ಹೋಗುತ್ತಿದ್ದಾಗ ನಾಲ್ವರು ಮನೆಗೆ ನುಗ್ಗಿ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡರು. ಅವರು ವ್ಯಕ್ತಿಯನ್ನು ಥಳಿಸಿ 1,400 ರೂ. ಕಸಿದುಕೊಂಡರು. ಅವರು ಹೆಚ್ಚಿನ ನಗದು ಮತ್ತು ಚಿನ್ನಾಭರಣ ಕೊಡುವಂತೆ ಒತ್ತಾಯಿಸಿದರು. ಆದರೆ, ದಂಪತಿಗಳ ಬಳಿ ಕೆಲವು ಬೆಳ್ಳಿ ಆಭರಣಗಳನ್ನು ಹೊರತುಪಡಿಸಿ ಏನೂ ಇರಲಿಲ್ಲ ಎಂದು ಹೇಳಿದರು.
ದರೋಡೆಕೋರರಿಗೆ ಬೇರೆ ಏನೂ ಸಿಗದಿದ್ದಾಗ, ಮಹಿಳೆ ಮೇಲೆ ಆಕೆಯ ಗಂಡನ ಮುಂದೆ ಅತ್ಯಾಚಾರ ಎಸಗಿದ್ದಾರೆ. ಘಟನೆಯ ನಂತರ ದಂಪತಿ ಆಘಾತಕ್ಕೊಳಗಾಗಿದ್ದು, ಮನೆಯೊಳಗೆ ಇದ್ದರು. ಅವರು ನ. 10 ರಂದು ಸ್ಥಳೀಯ ಪೊಲೀಸ್ ಠಾಣೆಗೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.