ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಪಾಪ ಅವರದ್ದು ಪ್ರೋಗ್ರಾಮಿಂಗ್ ಎಂಡ್ ಆಗ್ಬಿಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, 40%, 100% ಗಿರಾಕಿ ಯಾರಾದರೂ ಇದ್ದರೆ ಅದು ಡಿಕೆಶಿ. ಭ್ರಷ್ಟಾಚಾರಕ್ಕೆ ಹೊಸ ಮಾರ್ಕೆಟ್ ಮಾಡಿಕೊಂಡವರು ಡಿಕೆಶಿ ಎಂದು ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಎಂದಾಗ ಹೆಸರು ಬರುವುದೇ ಡಿ.ಕೆ. ಶಿವಕುಮಾರ್ ಎಂದು, ಕಾಂಗ್ರೆಸ್ ಅಂದರೆ ಗುಳುಂ ಎಂದು ಲೇವಡಿ ಮಾಡಿದ್ದಾರೆ.