Spread the love

ಮಕ್ಕಳಿಂದ ದೂರವಾಗಿ ಭಿಕ್ಷಾಟನೆಯಲ್ಲಿ ಸಿಕ್ಕ ವ್ಯಕ್ತಿಯನ್ನೇ ಮಗನೆಂದು ಭಾವಿಸಿದ್ದ 78 ವರ್ಷದ ವೃದ್ಧೆ ಭಿಕ್ಷುಕಿಯ ಮೇಲೆ ಅದೇ ಪಾಪಿ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ವೃದ್ಧೆಯ ಆರೋಗ್ಯ ಹದಗೆಟ್ಟಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಅಕ್ಟೋಬರ್​ 26 ರಂದು ಈ ಕೃತ್ಯ ನಡೆದಿದೆ. ಸಂತ್ರಸ್ತೆ ವೃದ್ಧೆ ಖಾಂಡಾ ನಿವಾಸಿಯಾಗಿದ್ದು, ರಾಜಧಾನಿಗೆ ತನ್ನ ಮಗನೊಂದಿಗೆ ಬಂದಿದ್ದಳು. ದುರ್ವಿಧಿ ಎಂಬಂತೆ ಹೆತ್ತ ಮಗ ಮೃತಪಟ್ಟಿದ್ದ. ಬಳಿಕ ಇನ್ನಿಬ್ಬರು ಮಕ್ಕಳು ಆಕೆಯನ್ನು ಮನೆಯಿಂದ ಹೊರದೂಡಿದ್ದರು. ಇದರಿಂದ ವೃದ್ಧೆ ಬೀದಿಪಾಲಾಗಿದ್ದರು.

ಬಳಿಕ ಆಕೆ ಭೋಪಾಲ್​ನ ದೇವಸ್ಥಾನವೊಂದರ ಮುಂದೆ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದರು. ಅಲ್ಲಿಂದ 37 ವರ್ಷದ ವ್ಯಕ್ತಿಯೊಬ್ಬ ಪರಿಚಯವಾಗಿದ್ದ. ಆತನನ್ನು ವೃದ್ಧೆ ಮಗನೆಂದೇ ಭಾವಿಸಿದ್ದಳು. ಒಂದೇ ಕಡೆ ವಾಸ, ಊಟ, ಭಿಕ್ಷಾಟನೆ ಮಾಡುತ್ತಿದ್ದರು. ತನ್ನ ಊಟದಲ್ಲೂ ಆತನಿಗೆ ಪಾಲು ನೀಡಿ ಮಾತೃಹೃದಯ ಮೆರೆದಿದ್ದಳು.

 


Spread the love