Spread the love

ಕಾಂತಾರ ಸಿನಿಮಾದ ಸಕ್ಸಸ್ ಬಳಿಕ ನಟಿ ಸಪ್ತಮಿ ಗೌಡ ಸಖತ್ ಬ್ಯುಸಿಯಾಗಿದ್ದಾರೆ. ಕಾಂತಾರ ಬಳಿಕ ಪರಭಾಷೆಯಿಂದಲೂ ಸಪ್ತಮಿಗೆ ಆಫರ್ ಬರುತ್ತಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇದೇ ಖುಷಿಯಲ್ಲಿ ಸಪ್ತಮಿ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ತಾಯಿ ಜೊತೆ ಭೇಟಿ ನೀಡಿದ್ದಾರೆ.

ಸೆಪ್ಟೆಂಬರ್ 30ರಂದು ಬಿಡುಗಡೆ ಆದ ಕಾಂತಾರ ಸಿನಿಮಾ 50ನೇ ದಿನ ಪೂರೈಸಿ ಮುನ್ನುಗುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿರುವ ಕಾಂತಾರಕ್ಕೆ ಪರಭಾಷೆಯ ಮಂದಿಯೂ ಫಿದಾ ಆಗಿದ್ದಾರೆ. ಈ ಸಿನಿಮಾದ ಬಳಿಕ ಸಪ್ತಮಿ ಗೌಡ ಸಖತ್ ಸದ್ದು ಮಾಡುತ್ತಿದ್ದಾರೆ. ಚಿತ್ರದ ಸಕ್ಸಸ್ ಬಳಿಕ ಸಪ್ತಮಿ ಗೌಡ ದೈವಿ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಕೊರಗಜ್ಜ, ಗುಳಿಗ ಸನ್ನಿಧಿಗೆ ಭೇಟಿಯ ನಂತರ ಇದೀಗ ಕಟೀಲು ದರ್ಗಾ ಪರಮೇಶ್ವರಿ ಸನ್ನಿಧಿಗೆ ನಟಿ ಭೇಟಿ ನೀಡಿದ್ದಾರೆ.

ಕನ್ನಡದ `ಕಾಂತಾರ’ ಈಗ ಗಡಿ ದಾಟಿ ಸೂಪರ್ ಸಕ್ಸಸ್ ಕಂಡಿದೆ. ಕಾಂತಾರ ಚಿತ್ರದ ಪ್ರತಿ ಕಲಾವಿದರಿಗೂ ಈಗ ಬೇಡಿಕೆ ಜಾಸ್ತಿಯಾಗಿದೆ. ಅದರಂತೆ ಚಿತ್ರದ ನಾಯಕಿ ಸಪ್ತಮಿ ಗೌಡ ಅವರಿಗೂ ಕೂಡ. ಚಿತ್ರದ ಸಕ್ಸಸ್ ನಂತರ ದೈವಿ ಕ್ಷೇತ್ರಗಳಿಗೆ ನಟಿ ಭೇಟಿ ನೀಡುತ್ತಿದ್ದಾರೆ. ಕೊರಗಜ್ಜ, ಗುಳಿಗ ಸನ್ನಿಧಿಗೆ ಭೇಟಿಯ ನಂತರ ಇದೀಗ ಕಟೀಲು ದರ್ಗಾ ಪರಮೇಶ್ವರಿ ಸನ್ನಿಧಿಗೆ ನಟಿ ಭೇಟಿ ನೀಡಿದ್ದಾರೆ.


Spread the love