Spread the love

ಭಾರತದ ಮೊದಲ ಖಾಸಗಿ ನಿರ್ಮಿತ ರಾಕೆಟ್ ವಿಕ್ರಮ್-ಸಬಾರ್ಬಿಟಲ್ (ವಿಕೆಎಸ್) ಯಶಸ್ವಿ ಉಡಾವಣೆಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬೆಳಗ್ಗೆ 11.30ರ ಸುಮಾರಿಗೆ ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಯಶಸ್ವಿ ಉಡಾವಣೆ ಮಾಡಿದೆ. ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ರಾಕೆಟ್‌ಗೆ ಭಾರತದ ಬಾಹ್ಯಾಕಾಶ ಕ್ಷೇತ್ರದ ಪಿತಾಮಹ ಎಂದು ಕರೆಯಲ್ಪಡುವ ವಿಕ್ರಮ್ ಸಾರಾಭಾಯ್ ಅವರ ಹೆಸರನ್ನು ಇಡಲಾಗಿದೆ.

IN-SPACe (ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ) ಅಧ್ಯಕ್ಷರಾದ ಡಾ ಪವನ್ ಕುಮಾರ್ ಗೋಯೆಂಕಾ ಅವರು ಯಶಸ್ವಿ ಉಡಾವಣೆಗೆ ಸಾಕ್ಷಿಯಾದ ಪ್ರಯತ್ನವನ್ನು ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಇದನ್ನು “ಮೈಲಿಗಲ್ಲು” ಮತ್ತು “ಹೊಸ ಯುಗ” ಎಂದು ಕರೆದರು.

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 2020 ರಲ್ಲಿ ಖಾಸಗಿ ಕಂಪನಿಗಳ ಭಾಗವಹಿಸುವಿಕೆಗಾಗಿ ಬಾಹ್ಯಾಕಾಶ ಕ್ಷೇತ್ರವನ್ನು ತೆರೆದ ನಂತರ ಮೊದಲ ಖಾಸಗಿ ರಾಕೆಟ್ ಉಡಾವಣೆ ಇದಾಗಿದೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ರಾಕೆಟ್ ಉಡಾವಣೆ ವೇಳೆ ಪಾಲ್ಗೊಂಡು ತಂಡದೊಂದಿಗಿನ ಫೋಟೋವನ್ನೂ ಹಂಚಿಕೊಂಡಿದ್ದಾರೆ. “ಇದು ನಿಜವಾಗಿಯೂ ಖಾಸಗಿ ಬಾಹ್ಯಾಕಾಶ ವಲಯಕ್ಕೆ ಹೊಸ ಪ್ರಾರಂಭ ಎಂದಿರುವ ಅವರು ಇದು ಭಾರತದ ಸ್ಟಾರ್ಟ್‌ಅಪ್ ಚಳುವಳಿಯಲ್ಲಿ ಒಂದು ಮಹತ್ವದ ತಿರುವು.” ಎಂದಿದ್ದಾರೆ.


Spread the love