Spread the love

ಲೂಧಿಯಾನ: ಜಿಲ್ಲೆಯ ಮುಲ್ಲನ್‌ಪುರ ರಸ್ತೆಯ ಸಿಟಿ ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ ಸಮಾರಂಭ ಹಿನ್ನೆಲೆ ಇನ್‌ಸ್ಟಾಗ್ರಾಮ್ ದಲ್ಲಿ ಹಾಕಿದ ಕಾಮೆಂಟ್ಸ್ ಸಂಬಂಧಿಸಿದಂತೆ ಹಳೆಯ ಹಾಗೂ ಪ್ರಸ್ತುತ ಓದುತ್ತಿರುವ ವಿದ್ಯಾರ್ಥಿಗಳ ನಡುವೆ ನಡೆದ ಸಂಘರ್ಷದಲ್ಲಿ ಐದು ವಿದ್ಯಾರ್ಥಿಗಳು ತೀವ್ರ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಭವಿಸಿದೆ.

 

ವಿಶ್ವವಿದ್ಯಾಲಯದ ಘಟಿಕೋತ್ಸವದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಸರಿಯಾಗಿ ಪೋಸ್ಟ್ ಮಾಡಲಾಗಿಲ್ಲ ಅಸಮಾಧಾನ ವ್ಯಕ್ತಪಡಿಸಿ ಹಳೆಯ ವಿದ್ಯಾರ್ಥಿಗಳು, ಕಮೆಂಟ್‌ಗಳನ್ನು ಹಾಕಿದ್ದರು. ಈ ಕಮೆಂಟ್ ಗಳಿಗೆ ಕುಪಿತಗೊಂಡ ಪ್ರಸ್ತುತ ಓದುತ್ತಿರುವ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿ,ಆಕ್ರೋಶ ವ್ಯಕ್ತಪಡಿಸಿದ್ದರು.

ವಿಶ್ವವಿದ್ಯಾನಿಲಯದ ಘಟಿಕೋತ್ಸವಕ್ಕೆ ಶುಕ್ರವಾರ ಹಳೆ ವಿದ್ಯಾರ್ಥಿಗಳು ಪದವಿ ಸ್ವೀಕರಿಸಲು ಬಂದಿದ್ದರು. ಸಮಾರಂಭ ಮುಗಿದ ಬಳಿಕ ವಿಶ್ವ ವಿದ್ಯಾನಿಲಯದ ಹೊರಗೆ ಜಮಾಯಿಸಿದ್ದ 5 ಮಂದಿ ಹಳೇ ವಿದ್ಯಾರ್ಥಿಗಳ ಗುಂಪು ಕಿರಿಯ ವಿದ್ಯಾರ್ಥಿಗಳೊಂದಿಗೆ ವಾಗ್ವಾದಕ್ಕಿದಿದೆ.

ಎರಡು ಗುಂಪುಗಳ ನಡುವೆ ಮಾತಿ ಮಾತಿಗೆ ಜಗಳ ಬೆಳೆದಿದೆ. ದಿಢೀರ್ ನೇ 30 ರಿಂದ 35 ಜ್ಯೂನಿಯರ್ ವಿದ್ಯಾರ್ಥಿಗಳ ಗುಂಪು ಸೇರಿ ಹರಿತ ಆಯುಧ, ಬೇಸ್‌ಬಾಲ್ ಬ್ಯಾಟ್‌ದಿಂದ ಹಳೇ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.


Spread the love

By admin