ನವದೆಹಲಿ: ಭಾರತ ಮೂಲದ ‘ಕೂ’ ಜಗತ್ತಿನ ಎರಡನೇ ಅತಿದೊಡ್ಡ ಮೈಕ್ರೋಬ್ಲಾಗ್ ಆಗಿ ಹೊರ ಹೊಮ್ಮಿದೆ ಎಂದು ಸಂಸ್ಥೆ ತಿಳಿಸಿದೆ. 2020ರ ಮಾರ್ಚ್ನಲ್ಲಿ ಆರಂಭವಾದ ಕೂ ಇತ್ತೀಚೆಗೆ 50 ಮಿಲಿಯನ್ ಡೌನ್ಲೋಡ್ ಆಗಿದ್ದು, ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಮೈಕ್ರೋಬ್ಲಾಗ್ ಆಗಿದೆ.
ನಮ್ಮ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅದನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ಕೇವಲ 2.5 ವರ್ಷದಲ್ಲಿ ನಾವು ಜಗತ್ತಿನ ಎರಡನೇ ಅತಿದೊಡ್ಡ ಮೈಕ್ರೋಬ್ಲಾಗ್ ಸಂಸ್ಥೆ ಆಗಿದ್ದೇವೆ. ಆರಂಭವಾದಾಗಿನಿಂದ ನಮ್ಮ ಬಳಕೆದಾರರು ನಮ್ಮ ಮೇಲೆ ನಂಬಿಕೆ ಹೊಂದಿದ್ದಾರೆ ಎಂದು ಸಿಇಒ ಹಾಗೂ ಸಹ ಸಂಸ್ಥಾಪಕರಾಗಿರುವ ಅಪ್ರಮೇಯ ರಾಧಕೃಷ್ಣ ತಿಳಿಸಿದ್ದಾರೆ.
ಟ್ವಿಟರ್, ಗೆಟ್ರದಂತಹ ಜಾಗತಿಕ ಮೈಕ್ರೋಬ್ಲಾಗಿಂಗ್ ಜೊತೆ ಸ್ಪರ್ಧೆ ಮಾಡುತ್ತಿರುವ ಭಾರತೀಯ ಮೈಕ್ರೋ ಬ್ಲಾಗ್ ಕೂ ಆಗಿದೆ. ಇಂದು ಕೂ ಎರಡನೇ ದೊಡ್ಡ ಮೈಕ್ರೊ ಬ್ಲಾಗ್ ಆಗಿದೆ. ಜಾಗತಿಕವಾಗಿ ಮೈಕ್ರೋ-ಬ್ಲಾಗಿಂಗ್ ಲ್ಯಾಂಡ್‌ಸ್ಕೇಪ್‌ನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿದರೆ, ಮೂಲ ಹಕ್ಕುಗಳನ್ನು ವಿಧಿಸಲಾಗುವ ಭೌಗೋಳಿಕ ಪ್ರದೇಶಗಳಿಗೆ ನಾವು ನಮ್ಮ ಸಾಮರ್ಥ್ಯ ವಿಸ್ತರಿಸಲು ನಾವು ನೋಡುತ್ತಿದ್ದೇವೆ ಎಂದು ಕೂ ಸಹ ಸಂಸ್ಥಾಪಕ ಮಯಂಕ್ ಬಿಡವತ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.