ತೆಲುಗು ನಟ ವಿಜಯ್ ದೇವರಕೊಂಡ ನಿನ್ನೆಯಷ್ಟೇ ಅಂಗಾಂಗ ದಾನ ಮಾಡುವುದಾಗಿ ತಿಳಿಸಿದ್ದರು. ಅಂಗಾಂಗ ದಾನದ ಪ್ರಕ್ರಿಯೆಗೆ ನೋಂದಣಿ ಮಾಡಿಸಿದ್ದಾರೆ. ವಿಜಯ್ ದೇವರಕೊಂಡ ಬಳಿಕ ಅವರ ತಾಯಿ ಮಾಧವಿ ಕೂಡ ತಮ್ಮ ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ. ಅವರು ಕೂಡ ಅಂಗಾಂಗ ದಾನಕ್ಕಾಗಿ ನೋಂದಣಿ ಮಾಡಿಸಿದ್ದಾರೆ.
ಮನುಷ್ಯ ಸತ್ತ ಮೇಲೆ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ. ಹಾಗಾಗಿ ಈ ಮಣ್ಣದಲ್ಲಿ ದೇಹ ಮಣ್ಣಾಗುವ ಬದಲು ಉಪಯೋಗವಾಗಲಿ ಎಂದಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ.
ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವರು ಕಣ್ಣು ದಾನ ಮಾಡುವುದರ ಮೂಲಕ ಜಗತ್ತಿಗೆ ಮಾದರಿಯಾಗಿದ್ದಾರೆ. ಸಂಚಾರಿ ವಿಜಯ್ ಅವರ ಕುಟುಂಬ ವಿಜಯ್ ಅವರ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದರು. ಇದೀಗ ವಿಜಯ್ ದೇವರಕೊಂಡ ಹಾಗೂ ಮಾಧವಿ ಕೂಡ ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ.
ತಮಗೆ ಇಂಥದ್ದೊಂದು ಯೋಚನೆ ಬಂದಿದ್ದು ವೈದ್ಯ ವಿದ್ಯಾರ್ಥಿಗಳನ್ನು ನೋಡಿದಾಗ ಮತ್ತು ಅವರೊಂದಿಗೆ ಮಾತನಾಡಿದಾಗ ಎಂದು ವಿಜಯ್ ತಿಳಿಸಿದ್ದಾರೆ. ಅಂಗಾಂಗ ದಾನ ಮಾಡುವಂತಹ ಅಪರೂಪದ ನಡೆಗೆ ವಿಜಯ್ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಇದು ಇತರರಿಗೂ ಮಾದರಿ ಆಗಲಿ ಎಂದು ಅಭಿಮಾನಿಗಳು ವಿಜಯ್ ನಡೆಯನ್ನು ಪ್ರಶಂಸಿಸಿದಿದ್ದಾರೆ.