ನಟಿ ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ಬಿಡುಗಡೆಯಾದ ‘ಯಶೋದಾ’ ಚಿತ್ರದ ಯಶಸ್ಸಿನಿಂದ ತುಂಬಾ ಖುಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದ ಯಶಸ್ಸಿಗಾಗಿ ಧನ್ಯವಾದದ ಸಂದೇಶ ಬರೆದು ತಮ್ಮ ಚಿತ್ರಕ್ಕೆ ಸಿಗುತ್ತಿರುವ ಪ್ರೀತಿಯಿಂದ ತಾವು ಆಕಾಶದಲ್ಲಿ ತೇಲುತ್ತಿರುವುದಾಗಿ ಹೇಳಿದ್ದಾರೆ. ಚಿತ್ರವನ್ನು ಬೆಂಬಲಿಸಿದ್ದಕ್ಕಾಗಿ ಅವರು ಟ್ವಿಟರ್ನಲ್ಲಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.
‘ಆತ್ಮೀಯ ವೀಕ್ಷಕರೇ, ಯಶೋದಾ ಚಿತ್ರಕ್ಕೆ ನೀವು ತೋರಿದ ಮೆಚ್ಚುಗೆ ಮತ್ತು ಪ್ರೀತಿಯು ನಾನು ನಿಮ್ಮಿಂದ ನಿರೀಕ್ಷಿಸಿದ್ದ ಬಹುದೊಡ್ಡ ಕೊಡುಗೆಯಾಗಿದೆ. ನಾನು ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿ ಹೋಗಿದ್ದೇನೆ. ಥಿಯೇಟರ್‌ಗಳಲ್ಲಿ ನಿಮ್ಮ ಸಿಳ್ಳೆ ಮತ್ತು ಸಂಭ್ರಮಾಚರಣೆ ನೋಡಿದರೆ ಯಶೋದಾ ಚಿತ್ರತಂಡವು ಪಟ್ಟ ಶ್ರಮವು ಸಾರ್ಥಕವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ನಾನು ಸ್ವರ್ಗದಲ್ಲಿದ್ದೇನೆ ಮತ್ತು ಯಶೋದಾ ಚಿತ್ರ ತಯಾರಿಕೆಯಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಈ ಯೋಜನೆಯಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಿರ್ಮಾಪಕ ಕೃಷ್ಣ ಪ್ರಸಾದ್ ಅವರಿಗೆ ನಾನು ವಿಶೇಷವಾಗಿ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಸಮಂತಾ ಬರೆದಿದ್ದಾರೆ.