Spread the love

ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ಜನಪ್ರಿಯ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪ್ರತಿ ಕುಟುಂಬಕ್ಕೆ ಸರ್ಕಾರದಿಂದ ಸಿಹಿ ಸುದ್ದಿ ಸಿಗಲಿದೆ. ತಿಂಗಳಿಗೆ 10,000 ಲೀಟರ್ ಕುಡಿಯುವ ನೀರು ಉಚಿತವಾಗಿ ನೀಡಲಾಗುವುದು.

ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ದಿನದ 24 ಗಂಟೆಯೂ ನೀರು ಸರಬರಾಜು ಮಾಡುವ ಜಲಜೀವನ್ ಮಿಷನ್ ಹರ್ ಘರ್ ಜಲ್ ಯೋಜನೆ ಜಾರಿಗೆ ಸರ್ಕಾರ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ 7 ಕೋಟಿ ಜನಸಂಖ್ಯೆ ಇದ್ದು, ಪ್ರತಿ ಮನೆಗೆ ಅಂದಾಜು ನಾಲ್ವರಂತೆ ಲೆಕ್ಕ ಹಾಕಿದರೆ 1.40 ಕೋಟಿ ಮನೆಗಳಾಗಬಹುದು. ಈ ಮನೆಗಳಿಗೆ ನೀರು ಸರಬರಾಜು ಮಾಡಲು ವಾರ್ಷಿಕ 250 ಕೋಟಿ ರೂ. ವೆಚ್ಚವಾಗಬಹುದು ಎನ್ನಲಾಗಿದೆ.

10,000 ಲೀಟರ್ ಗಿಂತ ಹೆಚ್ಚು ಪ್ರಮಾಣದ ನೀರು ಬಳಸುವವರಿಗೆ ಸ್ಲ್ಯಾಬ್ ರೀತಿ ಶುಲ್ಕ ವಿಧಿಸಲಾಗುವುದು. ಮೊದಲ 5000 ಲೀಟರ್ ಗೆ ಮತ್ತು ನಂತರದ 5 ಸಾವಿರ ಲೀಟರ್ ಗೆ ಶುಲ್ಕ ವಿಧಿಸಲಾಗುವುದು. ಯೋಜನೆ ಅಡಿಯಲ್ಲಿ ಪ್ರತಿ ನಲ್ಲಿ ಸಂಪರ್ಕಕ್ಕೆ ಮೀಟರ್ ಅಳವಡಿಸುವುದು ಕಡ್ಡಾಯವಾಗಿದೆ. ಉಚಿತವಾಗಿ ನೀರು ನೀಡುವುದರಿಂದ ಸೋರಿಕೆ ತಡೆಗಟ್ಟಬಹುದು, ವಿರೋಧವೂ ವ್ಯಕ್ತವಾಗುವುದಿಲ್ಲ ಎನ್ನುವ ಅಭಿಪ್ರಾಯ ಇದೆ ಎನ್ನಲಾಗಿದೆ.


Spread the love

By admin