Spread the love

ಬೆಂಗಳೂರು: ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಕಚೇರಿಯಲ್ಲಿದ್ದ ಮಹತ್ವದ ಫೈಲ್ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಇದು ಸಿಎಂ ಕಚೇರಿಯಲ್ಲಿಯೇ ಭದ್ರತೆ ಲೋಪವಿದೆಯಾ ಎಂಬ ಅನುಮಾನಕ್ಕೂ ಕಾರಣವಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಂಬಂಧಿಸಿದ ಮಹತ್ವದ ಫೈಲ್ ಒಂದು ಮಿಸ್ಸಿಂಗ್ ಆಗಿದೆ ಎಂದು ಹೇಳಲಾಗುತ್ತಿದೆ.

ನಗರಾಭಿವೃದ್ಧಿ ಇಲಾಖೆ ಬೆಂಗಳೂರಿನಲ್ಲಿ ಜಾಹಿರಾತು ನಿಯಮ ವಿಚಾರಕ್ಕೆ ಸಂಬಂಧಿಸಿದಂತೆ ಕಳುಹಿಸಿದ್ದ ಕಡತ ಇದಾಗಿದ್ದು, ಈ ಕಡತ ನಾಪತ್ತೆಯಾಗಿದೆ ಎನ್ನಲಾಗಿದೆ.

2021 ಡಿ.7ರಂದೇ ನಗರಾಭಿವೃದ್ಧಿ ಇಲಾಖೆ ಈ ಫೈಲ್ ನ್ನು ಸಿಎಂ ಕಚೇರಿಗೆ ಕಳುಹಿಸಿತ್ತು. ಆದರೆ ಫೈಲ್ ಇದುವರೆಗೂ ವಾಪಸ್ ಇಲಾಖೆಗೆ ಬಂದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಮುಖ್ಯಕಾರ್ಯದರ್ಶಿ, ಸಿಎಂ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸಿಎಂ ಕಚೇರಿಗೆ ಕಳುಹಿಸಿದ್ದ ಫೈಲ್ ಕಾಣದಿರುವುದು ಇದೀಗ ಭದ್ರತೆಯಲ್ಲಿ ಲೋಪವೇ? ಎಂಬ ಅನುಮಾನ ವ್ಯಕ್ತವಾಗಿದೆ.


Spread the love

By admin