ಬೆಂಗಳೂರು: ವಿದ್ಯಾರ್ಥಿಗಳಿಗೆ ಅಸಾಧ್ಯ ಎನ್ನುವುದು ಯಾವುದು ಇಲ್ಲ. ಮನೋಬಲದಿಂದ ತಮ್ಮ ಕನಸುಗಳನ್ನು ಸಾಧಿಸಿಕೊಳ್ಳಬಹುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಬಿಜಿಎಸ್ ಸಂಸ್ಥಾಪಕರ ದಿನಾಚರಣೆ ಹಾಗೂ ಬಿಜಿಎಸ್ ಜಿಮ್ಸ್ ಗ್ರಂಥಾಲಯ ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ ತಾರ್ಕಿಕ ಚಿಂತನೆಯೇ ವಿದ್ಯಾರ್ಥಿಗಳ ಯಶಸ್ಸಿನ ಮೆಟ್ಟಿಲು. ಒಮ್ಮೆ ವಿದ್ಯಾರ್ಥಿಯಾದರೆ ಜೀವನದಲ್ಲಿ ಎಂದೆಂದಿಗೂ ವಿದ್ಯಾರ್ಥಿಯೇ. ಶಿಕ್ಷಣದಲ್ಲಿ ಮೊದಲು ಪಾಠ ನಂತರ ಪರೀಕ್ಷೆ, ಆದರೆ ಬದುಕಿನಲ್ಲಿ ಮೊದಲು ಪಾಠ ,
ನಂತರ ಪರೀಕ್ಷೆ. ತಮ್ಮ ಗುರಿಗಳನ್ನು ಸಾಧಿಸಲು ಶ್ರಮಿಸಬೇಕು ಎಂದು ಕಿವಿ ಮಾತನ್ನು ಹೇಳಿದ್ದಾರೆ. ಇಂದಿನ ಕಾರ್ಯಕ್ರಮ ನೋಡಿದ ಮೇಲೆ ನನ್ನ ಕಾಲೇಜು ಜೀವನ ನೆನಪಾಯಿತು. ಕಾಲೇಜು ದಿನಗಳು ಎಲ್ಲ ವಿದ್ಯಾರ್ಥಿಗಳ ಸುಂದರ ದಿನಗಳು. ನೀವು ಶಕ್ತಿ, ಗುರಿ, ಕನಸು ಹಾಗೂ ಗುರಿಯನ್ನು ಸಾಧಿಸುವ ಛಲವನ್ನು ಹೊಂದಿರುವ ಸುರ್ವಣ ಸಮಯವಾಗಿದ್ದು,
ಯುವಜನರು ಬಹಳ ಜವಾಬ್ದಾರಿಯಿಂದ , ಜಾಗೂರಾಗಿರಬೇಕು. ವಿದ್ಯಾರ್ಥಿಗಳು ಇಂದು ಕಾಣುವ ಕನಸು ನಾಳೆ ನನಸಾಗುತ್ತದೆ. ಎಷ್ಟೇ ವಿದ್ಯೆಯಿದ್ದರೂ ವಿನಯ ಬಹಳ ಮುಖ್ಯ ವಿದ್ಯಾಸಂಸ್ಥೆಗಳು ಸರಸ್ವತಿಯ ವಾಹನ. ಪರಮಹಂಸ ಇದ್ದ ಹಾಗೆ ಅದು ಅತಿ ಎತ್ತರಕ್ಕೆ ಹಾರುವ ಪಕ್ಷಿ. ಅದು ಪವಿತ್ರವಾದ ಪಕ್ಷಿ ಆ ಮಟ್ಟದ ಎತ್ತರಕ್ಕೆ ವಿದ್ಯಾರ್ಥಿಗಳು ಬೆಳೆಯಬೇಕು. ವಿದ್ಯಾರ್ಥಿಗಳು ಸಮಾಜಕ್ಕೆ , ಕುಟುಂಬಕ್ಕೆ, ವಿದ್ಯೆ ಕಲಿತ ಸಂಸ್ಥೆಗೆ ಉತ್ತಮ ಕೊಡುಗೆಯನ್ನು ನೀಡಬೇಕು ಎಂದು ಹೇಳಿದ್ದಾರೆ.