Spread the love

 ಜರ್ಮನಿಯ ಬ್ರೌನ್ಸ್ಚವೆಯ್ಗ್ ಮತ್ತು ವಲ್ಫ್ಸ್ಬುರ್ಗ್ ನಗರಗಳಲ್ಲಿ ವಾಸಿಸುವ ಕನ್ನಡಿಗರು ಇತ್ತೀಚಿಗೆ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು. ಕನ್ನಡಿಗರೇ ಸೇರಿ ಪ್ರಾರಂಭಿಸಿದ ‘ಬ್ರಾ-ವೊ ಕನ್ನಡ ಬಳಗ’ ಸ್ಥಾಪನೆಯಾಗಿ ಮೂರು ವರುಷ ಪೂರೈಸಿದ ಹಿನ್ನೆಲೆ ಮೂರನೇ ವಾರ್ಷಿಕೋತ್ಸವದ ನಿಮಿತ್ತ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಈ ಬಳಗವು ಜರ್ಮನಿಯ ಲೋಯರ್ ಸ್ಯಾಕ್ಸನ್ ರಾಜ್ಯದ ಮೊದಲನೆಯ ಕನ್ನಡ ಬಳಗವಾಗಿದೆ. ಕನ್ನಡ ಬಳಗವು ಕನ್ನಡ ರಾಜ್ಯೋತ್ಸವ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ದೀಪ ಬೆಳಗಿಸಿ ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಂಘದ ಮುಖಂಡ ಶಿವರಾಯ್ ಜಾಣ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಶಕ್ತಿಯುತವಾಗಿ ಮುನ್ನಡೆಸಬೇಕು ಮತ್ತು ಮತ್ತಷ್ಟು ಸದಸ್ಯರನ್ನು ನೇಮಕ ಮಾಡಿಕೊಂಡು ಮುಂದಿನ ವರ್ಷ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸುವುದಾಗಿ ಹೇಳಿದರು.


Spread the love