Spread the love

ಮೆಕ್ಸಿಕೋ: ಇತ್ತೀಚೆಗಷ್ಟೆ ನಡೆದ ಅಫ್ತಾಬ್ ಹಾಗೂ ಶ್ರದ್ಧಾಳ ಕಥೆ ಗೊತ್ತೇ ಇದೆ. ಪ್ರೀತಿಸಿದಾಕೆಯನ್ನ ತುಂಡು ತುಂಡಾಗಿ ಕತ್ತರಿಸಿ ದೆಹಲಿಯ ಅನೇಕ ಭಾಗಗಳಲ್ಲಿ ಬಿಸಾಕಿದ್ದ. ಇಂತಹ ವಿಕೃತ ಮನಃಸ್ಥಿತಿ ಹೊಂದಿರುವ ಪ್ರೇಮಿಯ ಘಟನೆ ಇನ್ನೂ ಮಾಸಿಲ್ಲ. ಇದರ ಬೆನ್ನಲ್ಲೇ ಮೆಕ್ಸಿಕೋದಲ್ಲಿ ಇಂಥಹದ್ದೇ ಮತ್ತೊಂದು ಘಟನೆ ನಡೆದಿದೆ. ದೂರದಿಂದ ಪ್ರೇಮಿಯನ್ನ ನೋಡಲು ಬಂದಾಕೆಯನ್ನು ಕೊಂದು ಅವಳ ಅಂಗಾಂಗ ಮಾರಿದ್ದಾನೆ ಇಲ್ಲೊಬ್ಬ ಸೈಕೋ ಪ್ರೇಮಿ.

ಈ ಘಟನೆ ನಡೆದಿರೋದು ಮೆಕ್ಸಿಕೋದಲ್ಲಿ. ಬ್ಲಾಂಕಾ ಅರೆಲ್ಲನೋ ಎಂಬಾಕೆ ತನ್ನ ಪ್ರಿಯತಮನಾದ ಜುವಾನ್ ನೋಡಲು ಮೆಕ್ಸಿಕೋದಿಂದ ಸುಮಾರು 5 ಸಾವಿರ ಮೈಲಿ ದೂರ ಇರುವ ಪೆರುವಿಗೆ ಬಂದಿದ್ದಾಳೆ. ಬಂದ ನಂತರ ಇಬ್ಬರು ಒಂದು ವಾರ ಜೊತೆಯಲ್ಲೇ ಇದ್ದರು. ಒಂದು ವಾರದ ನಂತರ ಏನಾಯ್ತೋ ಗೊತ್ತಿಲ್ಲ. ಆಕೆಯನ್ನ ಕೊಂದ ಜುವಾನ್, ಆಕೆಯ ಅಂಗಾಂಗಗಳನ್ನ ಕಿತ್ತು ಮಾರಾಟ ಮಾಡಿದ್ದಾನೆ.

ಇವರಿಬ್ಬರ ಪ್ರೀತಿ ಅನ್ ಲೈನ್ ಮೂಲಕ ಶುರುವಾಗಿದೆ. ಬ್ಲಾಂಕಾ ಮನೆಯಿಂದ ಬರುವಾಗ ತನ್ನ ಪೋಷಕರಿಗೆ ಈತನನ್ನು ಪ್ರೀತಿಸುತ್ತಿರೋದಾಗಿ ಹೇಳಿ ಬಂದಿದ್ದಳಂತೆ. ನವೆಂಬರ್ 7 ರ ವರೆಗೆ ಆಕೆ ಕುಟುಂಬದ ಸಂಪರ್ಕದಲ್ಲಿ ಇದ್ದಳಂತೆ. ನಂತರ ಆಕೆ ಸಂಪರ್ಕಕ್ಕೆ ಸಿಗದೇ ಹೋದಾಗ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ಜುವಾನ್ ನನ್ನ ವಿಚಾರಣೆ ಮಾಡಿದಾಗ ಸತ್ಯಾಂಶ ಹೊರ ಬಂದಿದೆ. ಇನ್ನು ಆಕೆಯ ಅಂಗಾಂಗಗಳನ್ನು ಮಾರಾಟ ಮಾಡೋದಿಕ್ಕಾಗಿಯೇ ಕೊಲೆ ಮಾಡಿದ್ದಾನೆ ಜುವಾನ್.

 


Spread the love