Spread the love

ಬೈರುತ್: ಇಸ್ಲಾಮಿಕ್ ಸ್ಟೇಟ್ಸ್ ಅಥವಾ ಐಸಿಸ್‌ ಭಯೋತ್ಪಾದಕ ಗುಂಪಿನ ನಾಯಕ ಅಬು ಹಸನ್ ಅಲ್-ಹಶಿಮಿ ಅಲ್-ಖುರಾಶಿ ಯುದ್ಧದಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಭಯೋತ್ಪಾದಕ ಗುಂಪು ತಿಳಿಸಿದೆ. ಈ ಬೆನ್ನಲ್ಲೇ ಗುಂಪಿಗೆ ಮತ್ತೊಬ್ಬ ಯಕನನ್ನೂ ಘೋಷಣೆ ಮಾಡಿದೆ.

ಐಸಿಸ್‌ ಭಯೋತ್ಪಾದಕ ಸಂಘಟನೆಯು ಗುಂಪನ್ನು ಮುನ್ನಡೆಸಲು ಬದಲಿ ನಾಯಕನಾಗಿ ಅಬು ಅಲ್-ಹುಸೇನ್ ಅಲ್-ಹುಸೇನಿ ಅಲ್-ಖುರಾಶಿ ಹೆಸರನ್ನು ಘೋಷಿಸಲಾಗಿದೆ.

ದೇವರ ಶತ್ರುಗಳೊಂದಿಗಿನ ಯುದ್ಧದಲ್ಲಿ ನಾಯಕ ಹಸನ್ ಅಲ್-ಹಶಿಮಿ ಅಲ್-ಖುರಾಶಿ ಕೊಲ್ಲಲ್ಪಟ್ಟಿದ್ದಾರೆ ಎಂದು ಗುಂಪು ಘೋಷಿಸಿದೆ.  ಐಸಿಸ್‌ನ ಹಿಂದಿನ ನಾಯಕ ಅಬು ಇಬ್ರಾಹಿಂ ಅಲ್-ಖುರಾಶಿ ಈ ವರ್ಷದ ಆರಂಭದಲ್ಲಿ ಉತ್ತರ ಸಿರಿಯಾದ ಇಡ್ಲಿಬ್ ಪ್ರಾಂತ್ಯದಲ್ಲಿ ಅಮೆರಿಕ ನಡೆಸಿದ ದಾಳಿಯಲ್ಲಿ ಹತ್ಯೆಯಾಗಿದ್ದ. ಹಿಂದಿನ ನಾಯಕ ಅಬುಬಕರ್ ಅಲ್-ಬಾಗ್ದಾದಿಯನ್ನು 2019ರ ಅಕ್ಟೋಬರ್ ನಲ್ಲಿ ಇಡ್ಲಿಬ್‌ನಲ್ಲಿ ಪ್ರದೇಶದಲ್ಲಿ ಸಾವನ್ನಪ್ಪಿದ್ದ.


Spread the love

By admin