Spread the love

ಕೊಪ್ಪಳ: ಪೌರಾಣಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಇಂದು ಹನುಮದ್ ವ್ರತ ಅದ್ಧೂರಿಯಾಗಿ ಜರುಗಿತು.

ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬಂದು ಮಾಲೆ ವಿಸರ್ಜನೆ ಮಾಡಿದ್ರು. ಬೆಳಗಾವಿ, ಹುಬ್ಬಳ್ಳಿ, ಗದಗ, ಹಾವೇರಿ, ಬಾಗಲಕೋಟೆ, ಬಳ್ಳಾರಿ ಸೇರಿ ವಿವಿಧ ಜಿಲ್ಲೆಯಿಂದ ಹನುಮ ಭಕ್ತರು ಸಾಗರೋಪಾದಿ ಹರಿದು ಬಂದರು.

 

ಮಧ್ಯರಾತ್ರಿ 1 ಗಂಟೆಯಿಂದಲೇ ಮಾಲಾಧಾರಿಗಳು ಬೆಟ್ಟದ ಕಡೆ ಹೆಜ್ಜೆ ಹಾಕಿದರು. ಸಾವಿರಾರು ಮಾಲಾಧಾರಿಗಳು ಪಾದಯಾತ್ರೆ ಮೂಲಕ ಅಂಜನಾದ್ರಿಗೆ ಬಂದು ಪುನೀತರಾದರು.

ಇದೆಲ್ಲದರ ಮಧ್ಯೆ ಒಂದು ವಿಶೇಷ ಘಟನೆ ನಡೆಯಿತು. ಪುನೀತ್ ರಾಜ್ ಕುಮಾರ್ ಫೋಟೋ ಹಿಡಿದ ಮಾಲಾಧಾರಿಗಳು ಹನುಮನ ಜೊತೆ ಪುನೀತ್ ಜಪ ಕೂಡ ಮಾಡಿದರು. ಕೊಪ್ಪಳ ತಾಲೂಕಿನ ವದ್ನಾಳ ಗ್ರಾಮದ ಯುವಕರು ಪುನೀತ್ ಫೋಟೋ ಹಿಡಿದು ಬೆಟ್ಟ ಹತ್ತಿದರು. ಸುಮಾರು 50 ಕಿಲೋ‌ಮೀಟರ್ ಪುನೀತ್ ಫೋಟೋ ಹಿಡಿದು ಪಾದಯಾತ್ರೆ ಕೈಗೊಂಡರು.

ಪುನೀತ್ ಅಗಲಿ ಒಂದು ವರ್ಷವಾದರೂ ಪುನೀತ್ ರಾಜ್ ಕುಮಾರ್ ನೆನಪು ಮಾತ್ರ ಎಂದಿಗೂ ಅಜರಾಮರ. ಭೌತಿಕವಾಗಿ ಅವರು ಇಲ್ಲ ಅನ್ನೋದು ಬಿಟ್ರೆ ಮಾನಸಿಕವಾಗಿ ಎಂದಿಗೂ ಅವರು ಜೀವಂತವೇ ಸರಿ. ದೇವರಿಗೆ ಎಷ್ಟು ಸ್ಥಾನ ಕೊಟ್ಟಿದ್ದಾರೆ, ‘ಪರಮಾತ್ಮ’ನಿಗೂ ಅಂತದ್ದೇ ಸ್ಥಾನ ಕೊಟ್ಟಿದ್ದಾರೆ ಅಭಿಮಾನಿಗಳು.


Spread the love

By admin