ನವದೆಹಲಿ: ದೆಹಲಿಯ ಹೃದಯ ವಿದ್ರಾವಕ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಬಗ್ಗೆ ಚಿತ್ರ ನಿರ್ಮಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ. ಈ ಚಿತ್ರವನ್ನು ನಿರ್ಮಾಪಕ ಮತ್ತು ನಿರ್ದೇಶಕ ಮನೀಶ್ ಎಫ್ ಸಿಂಗ್ ನಿರ್ಮಿಸಲಿದ್ದಾರೆ ಎನ್ನಲಾಗಿದೆ ಈ ಬಗ್ಗೆ ಅವರು ಗುರುವಾರ ಇದನ್ನು ಘೋಷಿಸಿದ್ದಾರೆ.
ನಿರ್ಮಾಪಕ-ನಿರ್ದೇಶಕ ಮನೀಶ್ ಎಫ್ ಸಿಂಗ್ ಇತ್ತೀಚೆಗೆ ಶ್ರದ್ಧಾ ವಾಕರ್ ಅವರ ಮರ್ಡರ್ ಬಗ್ಗೆ ಚಿತ್ರ ಮಾಡಲು ತಯಾರಿ ನಡೆಸುತ್ತಿರುವುದಾಗಿ ಘೋಷಿಸಿದ್ದಾರೆ ಅಂತ ತಿಳಿಸಿದ್ದಾರೆ.
ಈ ನಡುವೆ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಮಾಹಿತಿ ಹೊರಬೀಳುತ್ತಿದೆ. ಸಧ್ಯ ಶ್ರದ್ಧಾಳ ತಂದೆ, ಈ ಹತ್ಯೆಯಲ್ಲಿ ಅಫ್ತಾಬ್ ಮಾತ್ರವಲ್ಲ ಆತನ ಕುಟುಂಬದ ಸದಸ್ಯರೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಶ್ರದ್ಧಾಳ ತಂದೆ, ‘ತಾನೊಮ್ಮೆ ಮದುವೆಯ ಪ್ರಸ್ತಾಪದೊಂದಿಗೆ ಅಫ್ತಾಬ್ ಮನೆಗೆ ಹೋಗಿದ್ದ. ಆದ್ರೆ, ಅಫ್ತಾಬ್ ಮದುವೆಗೆ ನಿರಾಕರಿಸಿದ್ದ. ಅಷ್ಟೇ ಅಲ್ಲ ಅಫ್ತಾಬ್ ಮನೆಯವರೂ ಈ ಮದುವೆಗೆ ಸಿದ್ಧರಿರಲಿಲ್ಲ. ಶ್ರದ್ಧಾ ಕೊಲೆಯಲ್ಲಿ ಅಫ್ತಾಬ್ ಮತ್ತು ಆತನ ಕುಟುಂಬದವರೂ ಭಾಗಿಯಾಗಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಂದ್ಹಾಗೆ, ಶ್ರದ್ಧಾ ಹತ್ಯೆಯ ಸುದ್ದಿಯ ನಂತ್ರ ಅಫ್ತಾಬ್ ಕುಟುಂಬವೂ ಇನ್ನೂ ನಾಪತ್ತೆಯಾಗಿದೆ. ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಅವರ ವಿರುದ್ಧ ಸಾಕ್ಷ್ಯ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.