Spread the love

ಟಾಲಿವುಡ್ ಚಿತ್ರರಂಗದ ಖ್ಯಾತ ನಟ ರಾಣಾ ದಗ್ಗುಭಾಟಿ ಇಂಡಿಗೋ ಏರ್ ಲೈನ್ ವಿರುದ್ಧ ಗರಂ ಆಗಿದ್ದಾರೆ. ರಾಣಾ ಲಗೇಜ್ ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾಗಿದ್ದು ಸೋಷಿಯಲ್ ಮೀಡಿಯಾ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

ಇತ್ತೀಚೆಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡಿದ ರಾಣಾಗೆ ಕಹಿ ಅನುಭವ ಆಗಿದೆ.

ಪ್ರಯಾಣಿಸುವಾಗ ರಾಣಾ ಅವರ ಲಗೇಜ್ ಕಳೆದು ಹೋಗಿದೆ. ಈವರೆಗೂ ಅವರ ಲಗೇಜ್ ಪತ್ತೆ ಆಗಿಲ್ಲ. ಇದೀಗ ಅವರು ನೇರವಾಗಿ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ತನ್ನ ಅನಿಕೆಯನ್ನ ಟ್ವೀಟ್ ಮಾಡುವ ಮೂಲಕ ಇಂಡಿಗೋ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಇದರಿಂದ ಇಂಡಿಗೋ ಕಂಪನಿಗೆ ಮುಜುಗರ ಆಗಿದೆ. ಈ ಬಗ್ಗೆ ಇಂಡಿಗೋ ಸಂಸ್ಥೆ ಕ್ಷಮೆ ಕೇಳಿದೆ. ಇಂಡಿಗೋ ವಿರುದ್ಧ ಗರಂ ಆಗಿರುವುದು ರಾಣಾ ಮಾತ್ರವಲ್ಲ, ಈ ಹಿಂದೆ ನಟಿ ಪೂಜಾ ಹೆಗ್ಡೆ ಕೂಡ ಈ ವಿಮಾನಯಾನ ಸಂಸ್ಥೆಯ ಸಿಬ್ಬಂದಿಗಳ ವರ್ತನೆ ವಿರುದ್ಧ ಬೇಸರ ಹೊರಹಾಕಿದ್ದರು. ಇದೀಗ ರಾಣಾ ಕೂಡ ಇಂಡಿಯೋ ವಿರುದ್ಧ ರಾಂಗ್ ಆಗಿದ್ದಾರೆ.

`ಭಾರತದ ಅತ್ಯಂತ ಕೆಟ್ಟ ಏರ್‌ಲೈನ್ ಅನುಭವ ಇಂಡಿಗೋ. ವಿಮಾನದ ಸಮಯದ ಬಗ್ಗೆಯೂ ಯಾವುದೇ ಸುಳಿವು ಇಲ್ಲ. ಲಗೇಜ್‌ಗಳು ಕಾಣೆಯಾಗಿವೆ’ ಎಂದು ರಾಣಾ ದಗ್ಗುಬಾಟಿ ಸೋಷಿಯಲ್ ಮೀಡಿಯಾ ಮೂಲಕ ಅಸಮಧಾನ ಹೊರಹಾಕಿದ್ದಾರೆ.

ಇಂಡಿಗೋ ಸಂಸ್ಥೆ ಅನಾನುಕುಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ನಿಮ್ಮ ಲಗೇಜ್ ಅನ್ನು ಆದಷ್ಟು ಬೇಗ ನಿಮಗೆ ತಲುಪಿಸಲು ನಮ್ಮ ತಂಡ ಸಕ್ರಿಯವಾಗಿದೆ ಕಾರ್ಯನಿರ್ವಹಿಸುತ್ತಿದೆ ಎಂದು ಇಂಡಿಗೋ ಸಂಸ್ಥೆ ಪ್ರತಿಕ್ರಿಯೆ ನೀಡಿದೆ. ಇಂಡಿಯೋ ಪ್ರತಿಕ್ರಿಯೆ ಬಳಿಕ ರಾಣಾ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದರು. ಆದರೆ ರಾಣಾ ಟ್ವೀಟ್ ಆಗಲೇ ಸುದ್ದಿ ಆಗಿತ್ತು. ಕೆಲ ನೆಟ್ಟಿಗರು ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಇಂಡಿಯೋ ತಕ್ಷಣ ಪ್ರತಿಕ್ರಿಯೆ ನೀಡಿದೆ. ಆದರೆ ಜನ ಸಾಮಾನ್ಯರ ಕಥೆ ಏನು ಪ್ರಶ್ನೆ ಮಾಡಿದ್ದಾರೆ.


Spread the love