Spread the love

ಬೆಂಗಳೂರು: ಬಿಜೆಪಿ ಅವರು ಮೊದಲು ಆಪರೇಷನ್ ಕಮಲಾ ಮಾಡಿ ಇದೀಗ ರೌಡಿಗಳ ಆಪರೇಷನ್ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಮೊದಲು ಆಪರೇಷನ್ ಕಮಲ ಮಾಡಿದ್ದರು.

ಈಗ ರೌಡಿಗಳ ಆಪರೇಷನ್ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ಶುಭವಾಗಲಿ, ಯಶಸ್ಸಾಗಲಿ ಎಂದು ಟಾಂಗ್ ನೀಡಿದರು. ದೇಶದಲ್ಲಿ ನಮ್ಮ ಪಕ್ಷನೇ ಇಲ್ಲ, ಅವರದೇ ಪಕ್ಷ ತಾನೇ ಇರುವುದು ದೇಶದಲ್ಲಿ. ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರ.

ಏನೋ ನಾವು ನಾಲ್ಕು ಜನ ಹೆಣ ಹೊರಲು ನಾಲ್ಕು ಜನ ಇದ್ದೇವೆ, ತಮಟೆ ಬಡೆಯಲು ನಾಲ್ಕು ಜನ ಇದ್ದೇವೆ ಅಷ್ಟೇ. ಉಳಿದಂತೆ ಎಲ್ಲಾ ಬಿಜೆಪಿಯವರದ್ದೇ. ಬಿಜೆಪಿಗೆ ಅಭ್ಯರ್ಥಿಗಳು ಇದ್ದಾರೆಯೇ ಅಥವಾ ಇಲ್ಲವೋ ಎಂಬುದನ್ನ ಅವರನ್ನೇ ಕೇಳಿ ಎಂದರು. ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಮೂರ್ನಾಲ್ಕು ದಿನಗಳಲ್ಲಿ ಚುನಾವಣೆ ಸಮಿತಿ ರಚನೆ ಆಗುತ್ತದೆ. ದೆಹಲಿ ಇಂದ ಸಮಿತಿ ಸದಸ್ಯರ ಪಟ್ಟಿ ಬಿಡುಗಡೆ ಆಗುತ್ತದೆ ಎಂದರು. ಮಹಾರಾಷ್ಟ್ರ ಗಡಿ ತಗಾದೆ ವಿಚಾರ ಪ್ರತಿಕ್ರಿಯೆ ನೀಡಲು ಕೆಪಿಸಿಸಿ ಅಧ್ಯಕ್ಷರು ನಿರಾಕರಿಸಿದರು.


Spread the love

By admin