Spread the love

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 134 ಸ್ಥಾನಗಳನ್ನು ಗೆಲ್ಲುವ ಮೂಲಕ ಆಮ್ ಆದ್ಮಿ ಪಕ್ಷ ಸರಳ ಬಹುಮತ ಪಡೆದುಕೊಂಡಿದೆ. ಬಿಜೆಪಿ 104 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, 15 ವರ್ಷಗಳ ಬಳಿಕ ಪಾಲಿಕೆ ಗದ್ದುಗೆ ಬಿಟ್ಟು ಕೊಡಬೇಕಾಗಿ ಬಂದಿದೆ. ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿದೆ.

ದೆಹಲಿ ಪಾಲಿಕೆ ಮೇಯರ್ – ಉಪಮೇಯರ್ ಚುನಾವಣೆಗೆ 250 ಪಾಲಿಕೆ ಸದಸ್ಯರು, 10 ಮಂದಿ ಸಂಸದರು ಹಾಗೂ ದೆಹಲಿ ವಿಧಾನಸಭೆಯ 70 ಶಾಸಕರ ಪೈಕಿ 14 ಶಾಸಕರು ಮತ ಚಲಾಯಿಸಬಹುದಾಗಿದ್ದು, ಈ 14 ಮಂದಿ ಶಾಸಕರನ್ನು ಸರದಿ ಪ್ರಕಾರ ಆಯ್ಕೆ ಮಾಡಲಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಆಮ್ ಆದ್ಮಿ ಪಕ್ಷದ ಬಲ 148 ಆಗಲಿದ್ದರೆ ಬಿಜೆಪಿ ಬಲ 114 ಆಗಬಹುದು.

ಇದರ ಮಧ್ಯೆ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯಾ ಅವರು ಮಾಡಿರುವ ಟ್ವೀಟ್ ಒಂದು ಕುತೂಹಲ ಕೆರಳಿಸಿದೆ. ಚಂಡಿಗಢ ಪಾಲಿಕೆ ಉದಾಹರಣೆಯನ್ನು ಮಾಳವೀಯ ಅವರು ನೀಡಿದ್ದು, ಅಲ್ಲಿ ಆಮ್ ಆದ್ಮಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸಹ ಬಿಜೆಪಿ ಅಭ್ಯರ್ಥಿ ಮೇಯರ್ ಆಗಿ ಆಯ್ಕೆ ಆಗಿದ್ದಾರೆ. ಹೀಗಾಗಿ ಆಪರೇಷನ್ ಕಮಲದ ಮೂಲಕ ದೆಹಲಿ ಪಾಲಿಕೆಯಲ್ಲೂ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆಯಾ ಎಂಬ ಪ್ರಶ್ನೆ ಈಗ ಮೂಡಿದೆ.


Spread the love