ಯುನೈಟೆಡ್ ಕಿಂಗ್ ಡಮ್ ನ ಲುಟನ್ ನಲ್ಲಿ ಕಿಂಗ್ ಚಾರ್ಲ್ಸ್ ಮೇಲೆ ಮೊಟ್ಟೆ ಎಸೆದ ವ್ಯಕ್ತಿಯನ್ನು ಬಂಧಿಸಲಾಗಿದೆ. ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಇಂತಹ ಘಟನೆ ನಡೆದಿದೆ. ಕಿಂಗ್ ಚಾರ್ಲ್ಸ್ ಲುಟನ್ ನಲ್ಲಿ ವಾಕ್ ಬೌಟ್ ನಲ್ಲಿದ್ದಾಗ ಈ ಘಟನೆ ನಡೆದಿದೆ.
ಸೇಂಟ್ ಜಾರ್ಜ್ ಸ್ಕ್ವೇರ್‌ನಲ್ಲಿ ಬಂಧಿಸಿದ ನಂತರ ಶಂಕಿತನನ್ನು ವಿಚಾರಣೆಗಾಗಿ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಬೆಡ್‌ಫೋರ್ಡ್‌ಶೈರ್ ಪೊಲೀಸರು ತಿಳಿಸಿದ್ದಾರೆ. ಕಿಂಗ್ ಚಾರ್ಲ್ಸ್‌ನ ಭದ್ರತಾ ತಂಡವು ಲುಟನ್ ಟೌನ್ ಹಾಲ್‌ನ ಹೊರಗಿನ ಜನಸಂದಣಿಯಿಂದ ವ್ಯಕ್ತಿಯನ್ನು ದೂರಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.