Spread the love

`ಕಾಂತಾರ’ ಚಿತ್ರದ ಸೂಪರ್ ಸಕ್ಸಸ್ ಬಳಿಕ ನಟ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಜೊತೆ ಸಾಕಷ್ಟು ದೇವಸ್ಥಾನಗಳಿಗೆ  ಭೇಟಿ ನೀಡುತ್ತಿದ್ದಾರೆ ಅದರಂತೆ ಇಂದು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

`ಕಾಂತಾರ’ ನಿನಿಮಾ ಯಶಸ್ಸಿನ ಬಳಿಕ ಇದೇ ಮೊದಲ ಬಾರಿಗೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಿಷಬ್ ದಂಪತಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಳದ ವತಿಯಿಂದ ರಿಷಬ್ ಶೆಟ್ಟಿಗೆ ಆತ್ಮೀಯ ಗೌರವ ನೀಡಲಾಗಿದ್ದು, ದೇವರ ಶೇಷ ವಸ್ತ್ರ, ಪ್ರಸಾದ ನೀಡಿ ಆಡಳಿತ ಮಂಡಳಿ ಗೌರವ ಸೂಚಿಸಿದೆ. ಬಳಿಕ ನೆಚ್ಚಿನ ನಟನ ಜೊತೆ ದೇವಸ್ಥಾನದ ಮುಂಭಾಗ ಸೆಲ್ಪಿ ಕ್ಲಿಕ್ಕಿಸಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಚಿತ್ರಮಂದಿರದಲ್ಲಿನ ಕಾಂತಾರ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಜೊತೆಗೆ ಒಟಿಟಿಯಲ್ಲು ಸಿನಿಮಾ ಸೌಂಡ್ ಮಾಡುತ್ತಿದೆ. ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿರುವ ರಿಷಬ್ ಮುಂದಿನ ಸಿನಿಮಾ ಯಾವುದು ಎಂಬ ಕ್ಯೂರಿಯಾಗಿಸಿ ಕ್ರಿಯೇಟ್ ಆಗಿದೆ.


Spread the love