ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವಾಗ ಇವಿಎಂ ಟ್ಯಾಂಪರಿಂಗ್ ಮಾಡಿದ ಆರೋಪದ ವಿರುದ್ಧ ಗಾಂಧಿಧಾಮ್‌ನ ಕಾಂಗ್ರೆಸ್ ಅಭ್ಯರ್ಥಿ ಭಾರತಭಾಯ್ ವೆಲ್ಜಿಭಾಯ್ ಸೋಲಂಕಿ ಅವರು ತಮ್ಮ ಕುತ್ತಿಗೆಗೆ ಬಟ್ಟೆಯ ಕುಣಿಕೆ ಹಾಕಿಕೊಂಡು ಆತ್ಮಹತ್ಯೆಯ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಬಿಜೆಪಿಯ ಮಾಲ್ತಿ ಕಿಶೋರ್ ಮಹೇಶ್ವರಿ ಅವರಿಗಿಂತ 12,000 ಕ್ಕೂ ಹೆಚ್ಚು ಮತಗಳಿಂದ ಹಿಂದುಳಿದಿದ್ದ ಸೋಲಂಕಿ, ಕೆಲವು ಇವಿಎಂಗಳನ್ನು ಸರಿಯಾಗಿ ಸೀಲ್ ಮಾಡಿಲ್ಲ ಎಂದು ಆರೋಪಿಸಿದ್ದರು. ಅಸಮಾಧಾನಗೊಂಡ ಸೋಲಂಕಿ ನಂತರ ಎಣಿಕೆ ಕೊಠಡಿಯಲ್ಲಿ ಇವಿಎಂ ಟ್ಯಾಂಪರಿಂಗ್ ಆರೋಪ ಮಾಡುತ್ತಾ ಧರಣಿ ಕುಳಿತರು. ಬಳಿಕ ಅವರು ಕೊರಳಿಗೆ ಬಟ್ಟೆಯ ಕುಣಿಕೆಯನ್ನು ಕಟ್ಟಿಕೊಂಡು ಆಕ್ರೋಶ ಹೊರಹಾಕಿದರು.