ಜಕಾರ್ತ: ಇಂಡೊನೇಷ್ಯಾದ ಸುಮಾರ್ತ ಪ್ರಾಂತ್ಯದ ಸವಲುಂಟೊ ಜಿಲ್ಲೆಯಲ್ಲಿರುವ ಖಾಸಗಿ ಒಡೆತನದ ಕಲ್ಲಿದ್ದಲು ಗಣಿಯಲ್ಲಿ ಭಾರಿ ಸ್ಪೋಟ ಸಂಭವಿಸಿದ ಪರಿಣಾಮ 10 ಗಣಿ ಕಾರ್ಮಿಕರು ಮೃತರಾಗಿದ್ದು, ನಾಲ್ವರನ್ನು ರಕ್ಷಿಸಲಾಗಿದೆ.
ಕಾಣೆಯಾದ ಒಬ್ಬರಿಗಾಗಿ ಸ್ಥಳೀಯ ರಕ್ಷಣಾ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಗಣಿಯಲ್ಲಿ ಮೀಥೇನ್ ಹಾಗೂ ಹಾನಿಕಾರಕ ಅನಿಲಗಳಿಂದ ಸ್ಫೋಟ ಸಂಭವಿಸಿದ್ದು, ಒಟ್ಟು 12 ಕಾರ್ಮಿಕರು ಸ್ಥಳದಲ್ಲಿ ಇದ್ದರು ಎನ್ನಲಾಗಿದೆ.
ಘಟನೆಯಲ್ಲಿ ಮೃತಪಟ್ಟ ಹೆಚ್ಚಿನವರು ಸುಟ್ಟಗಾಯಗಳನ್ನು ಅನುಭವಿಸಿದರು. ಬದುಕುಳಿದವರೆಲ್ಲರೂ ಉಸಿರಾಟದ ತೊಂದರೆ ಅನುಭವಿಸಿದರು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಯಿತು “ಎಂದು ಸ್ಥಳೀಯ ಹುಡುಕಾಟ ಮತ್ತು ಪಾರುಗಾಣಿಕಾ ಏಜೆನ್ಸಿಯ ವಕ್ತಾರ ಒಕ್ಟೇವಿಯಾಂಟೊ ಹೇಳಿದ್ದಾರೆ.