ಬೆಂಗಳೂರು: ಜಮೀನು ಸರ್ವೆ ಸಂಬಂಧ ಕೋರ್ಟ್ ಆದೇಶ ಪಾಲನೆಗೆ ವಿಳಂಬ ತೋರಿದ ಹಿನ್ನೆಲೆಯಲ್ಲಿ ಹೈಕೋರ್ಟ್ ದಂಡ ವಿಧಿಸಿದೆ. 8 ವರ್ಷ ವಿಳಂಬಕ್ಕೆ ಕಾರಣರಾದ ತಹಶೀಲ್ದಾರ್ ಗಳಿಗೆ 3 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಪಾಂಡವಪುರ ತಹಶೀಲ್ದಾರ್ ಗಳಿಗೆ ಹೈಕೋರ್ಟ್ 3 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಪಾರ್ವತಮ್ಮ ಎಂಬುವವರು ಹೈಕೋರ್ಟ್ ಗೆ ರಿಟ್ ಸಲ್ಲಿಸಿದ್ದರು. ಸರ್ವೆ, ಪೋಡಿ ದುರಸ್ತಿ ಮಾಡಲು ಹೈಕೋರ್ಟ್ ಆದೇಶ ನೀಡಿತ್ತು. 2014ರ ಆದೇಶ 2022 ರಲ್ಲಿ ಪಾಂಡವಪುರ ತಹಶೀಲ್ದಾರ್ ಪಾಲಿಸಿದ್ದರು. ಜನ ಕೊನೆ ದಾರಿ ಎಂದು ನ್ಯಾಯಾಲಯಕ್ಕೆ ಬರುತ್ತಾರೆ. ಕೋರ್ಟ್ ಆದೇಶ ಪಾಲನೆಯಾಗದಿದ್ದರೆ ಜನರು ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದು ಹೇಳಿದ ಹೈಕೋರ್ಟ್, ತಪ್ಪಿತಸ್ಥ ತಹಶೀಲ್ದಾರ್ ಗಳಿಂದ 3 ಲಕ್ಷ ರೂಪಾಯಿ ದಂಡ ವಸೂಲಿಗೆ ಆದೇಶ ನೀಡಿದೆ.
ದಂಡದ ಹಣ ಅರ್ಜಿದಾರರ ವೃದ್ಧೆಗೆ ಪಾವತಿಸುವಂತೆ ಹೈಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಪೀಠ ಆದೇಶ ನೀಡಿದೆ.