Spread the love

ಸೂಪರ್ ಸ್ಟಾರ್ ರಜನಿಕಾಂತ್ ಅವರ ಎರಡು ದಶಕಗಳ ಹಳೆಯ ದಾಖಲೆಯನ್ನು ಹಿಂದಿಕ್ಕಿದ ‘RRR’ ಜಪಾನ್‌ ನಲ್ಲಿ ಅತಿ ಹೆಚ್ಚುಗಳಿಕೆ ಮಾಡಿದ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಜನಿಕಾಂತ್ ಅವರ ‘ಮುತ್ತು’ ಜಪಾನ್ ನಲ್ಲಿ ಅತಿಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರವಾಗಿದ್ದು, ಅದನ್ನು ‘ಆರ್.ಆರ್.ಆರ್.’ ಹಿಂದಿಕ್ಕಿದೆ.

 

ಅಕ್ಟೋಬರ್ 21 ರಂದು ಜಪಾನ್‌ನಲ್ಲಿ ಬಿಡುಗಡೆಯಾದ ಎಸ್‌.ಎಸ್. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಎರಡು ದಶಕಗಳ ಕಾಲ ದಾಖಲೆಯನ್ನು ಹೊಂದಿದ್ದ ರಜನಿಕಾಂತ್ ಅವರ ‘ಮುತ್ತು’ ಹಿಂದಿಕ್ಕಿ ದೇಶದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿದೆ.

ಜಪಾನ್‌ನ 44 ನಗರಗಳು ಮತ್ತು ಪ್ರಿಫೆಕ್ಚರ್‌ಗಳಲ್ಲಿ 209 ಸ್ಕ್ರೀನ್‌ಗಳು ಮತ್ತು 31 ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾದ ‘RRR’ JPY400 ಮಿಲಿಯನ್(ಸುಮಾರು 24 ಕೋಟಿ ರೂ.) ದಾಟಿ ಅಗ್ರಸ್ಥಾನ ಪಡೆದುಕೊಂಡಿದೆ.

24 ವರ್ಷಗಳ ಹಿಂದೆ ಬಿಡುಗಡೆಯಾದ ರಜನಿಕಾಂತ್ ಅವರ ಮುತ್ತು, ಎರಡು ದಶಕಗಳಿಂದ JPY400 ಮಿಲಿಯನ್ ಬಾಕ್ಸ್ ಆಫೀಸ್ ಸಂಗ್ರಹದೊಂದಿಗೆ ಜಪಾನ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರವಾಗಿತ್ತು. ‘RRR’ JPY 400 ಮಿಲಿಯನ್ ದಾಟಿ ಅಗ್ರಸ್ಥಾನ ಪಡೆದುಕೊಂಡಿದೆ.

ಎಸ್‌.ಎಸ್. ರಾಜಮೌಳಿ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಚಿತ್ರದ ಪ್ರಚಾರಕ್ಕಾಗಿ ಕೆಲವು ವಾರಗಳ ಹಿಂದೆ ಜಪಾನ್‌ ಗೆ ತೆರಳಿದ್ದರು. RRR ವಿಶ್ವಾದ್ಯಂತ 1100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ.

ಇತ್ತೀಚೆಗೆ, ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಅವಾರ್ಡ್ಸ್‌ ನಲ್ಲಿ ಎಸ್‌ಎಸ್ ರಾಜಮೌಳಿ ‘ಆರ್‌ಆರ್‌ಆರ್’ಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.


Spread the love