ಪಾಟ್ನಾ: ಬಿಹಾರ್‌ನ ಸಮಸ್ತಿಪುರದಲ್ಲಿ 50 ವರ್ಷ ವಯಸ್ಸಿನ ಇಂಗ್ಲಿಷ್ ಶಿಕ್ಷಕರೊಬ್ಬರು 20 ವಯಸ್ಸಿನ ತನ್ನ ವಿದ್ಯಾರ್ಥಿನಿಯೊಂದಿಗೆ ಸಪ್ತಪದಿ ತುಳಿದಿದ್ದಾರೆ. ಶ್ವೇತಾ ಕುಮಾರಿ ವಿದ್ಯಾರ್ಥಿನಿ, ಶಿಕ್ಷಕ ಸಂಗೀತ್ ಕುಮಾರ್ ಅವರನ್ನು ವರಿಸಿದ್ದಾರೆ.
20 ವರ್ಷದ ವಿದ್ಯಾರ್ಥಿ ನಿಯು ಇಂಗ್ಲಿಷ್ ಕಲಿಯಲು ಮನೆಯಿಂದ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್ದಳು. ಅಲ್ಲಿ 50 ವರ್ಷದ ಇಂಗ್ಲಿಷ್ ಶಿಕ್ಷಕನೊಂದಿಗೆ ವಿದ್ಯಾರ್ಥಿನಿಗೆ ಪ್ರೇಮಾಂಕುರವಾಗಿದೆ. ಕೊನೆಗೆ ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾದರು.
ಸಮಸ್ತಿಪುರದ ದೇವಸ್ಥಾನದಲ್ಲಿ ಇಬ್ಬರೂ ವಿವಾಹವಾಗಿದ್ದಾರೆ. ಇವರಿಬ್ಬರ ಮದುವೆಗೆ ಪರಿಚಯಸ್ಥರು ಸಾಕ್ಷಿಯಾಗಿದ್ದಾರೆ. ಇಬ್ಬರ ಮದುವೆಯ ವೀಡಿಯೋ ಕೂಡ ಮಾಡಲಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡುತ್ತಿದೆ. 50 ವರ್ಷದ ಇಂಗ್ಲಿಷ್ ಶಿಕ್ಷಕ ಸಂಗೀತ್ ಅವರ ಪತ್ನಿ ಕೆಲ ವರ್ಷಗಳ ಹಿಂದೆ ನಿಧನರಾದರು. ಅವರು ಎರಡನೇ ಮದುವೆ ಕೂಡ ಮಾಡಿಕೊಂಡಿರಲಿಲ್ಲ. ಶ್ವೇತಾ ಮತ್ತು ಅವರ ಮನೆ ಕೇವಲ 800 ಮೀಟರ್ ದೂರದಲ್ಲಿದೆ. ಇಂಗ್ಲಿಷ್ ಕೋಚಿಂಗ್ ಸಮಯದಲ್ಲಿ ಇಬ್ಬರೂ ಪ್ರೀತಿಸುತ್ತಿದ್ದರು. ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.