ಬೆಂಗಳೂರಿನ ಫೇಮಸ್ ಈಟ್ ಸ್ಪಾಟ್ಗೆ ಹೊಸ ಲುಕ್ ಸಿಗಲಿದೆ. ದಕ್ಷಿಣ ಬೆಂಗಳೂರಿನ ಜನರಿಗೆ ಸಂಜೆಯ ವೇಳೆ ಕಳೆಯಲು ಇರೋ ವಿವಿಪುರಂ ಫುಡ್ ಸ್ಟ್ರೀಟ್ ಇನ್ಮುಂದೆ ಆಧುನಿಕ ಟಚ್ ಪಡೆಯಲಿದೆ. ವಿವಿ ಪುರಂ ಫುಡ್ಸ್ಟ್ರೀಟ್ ಅನ್ನು ಆಧುನೀಕರಿಸಲು, ಬಿಬಿಎಂಪಿ ಸಜ್ಜಾಗಿದೆ.
ಫುಡ್ ಸ್ಟ್ರೀಟ್ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಚಿಕ್ಕಪೇಟೆ ಶಾಸಕ ಉದಯ್ ಗರುಡಚಾರ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್ ರಾಯಪುರ, ದಕ್ಷಿಣ ವಲಯ ಮುಖ್ಯ ಇಂಜಿನಿಯರ್ ಮೋಹನ್ ಕೃಷ್ಣ, ಕಾರ್ಯಪಾಲಕ ಇಂಜಿನಿಯರ್ ಮಹಾ0ತೇಶ್ ಸೇರಿ ಹಲವು ಗಣ್ಯರ ಭಾಗಿಯಾಗಿದ್ರು.
ಈ ವೇಳೆ ಮಾತನಾಡಿದ ಶಾಸಕ ಉದಯ ಗರುಡಾಚಾರ್, ಮುಂದಿನ 3 ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ರು. ಇದೆ ರೀತಿ ಮುಂದಿನ ದಿನಗಳಲ್ಲಿ ನಗರದ ಹಲವೆಡೆ ಕೂಡ ಫುಡ್ ಸ್ಟ್ರೀಟ್ ಅಭಿವೃದ್ಧಿ ಪಡಿಸಲು ಬಿಬಿಎಂಪಿ ನಿರ್ಧರಿಸಿದೆ. 7 ಕೋಟಿ ರು ವೆಚ್ಚದಲ್ಲಿ ತಿಂಡಿ ಬೀದಿ ನಿರ್ಮಾಣವಾಗಲಿದೆ. ಸಮರ್ಪಕ ಮೂಲ ಸೌಕರ್ಯಗಳನ್ನ ಒದಗಿಸಲು ಬಿಬಿಎಂಪಿ ವಿಭಿನ್ನ ಪ್ರಯತ್ನ ನಡೆಸಿದ್ದು, ಶಾಸಕರ ಅನುದಾನದ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.