Spread the love

ಬೆಂಗಳೂರು: ಕಾಂಗ್ರೆಸ್ ಪಕ್ಷ ತೊರೆದವರ ವಿರುದ್ಧ ನಾಯಕರು ತೊಡೆತಟ್ಟಿದ್ದು, ರಿವರ್ಸ್ ಆಪರೇಷನ್ ಗೆ ಮುಂದಾಗಿದ್ದಾರೆ.

ಈ ರೀತಿ ಮುಂದಾದ ಕಾಂಗ್ರೆಸ್ ನಿಂದ ಎರಡನೇ ಬೇಟೆ ನಡೆದಿದೆ. ಸಚಿವ ಬಿ.ಸಿ. ಪಾಟೀಲ್ ವಿರುದ್ಧ ಯು.ಬಿ. ಬಣಕಾರ್ ಆಪರೇಷನ್ ಹಸ್ತ ಸಕ್ಸಸ್ ಆಗಿದ್ದು, ಸಚಿವ ಅರೆಬೈಲ್ ಶಿವರಾಂ ಹೆಬ್ಬಾರ್ ವಿರುದ್ಧವೂ ರಿವರ್ಸ್ ಆಪರೇಷನ್ ಮಾಡಲಾಗಿದೆ.

 

ಮಾಜಿ ಶಾಸಕ ವಿ.ಎಸ್. ಪಾಟೀಲ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ನಿಗದಿಯಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ವಿ.ಎಸ್. ಪಾಟೀಲ್ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಪಕ್ಷ ತೊರೆದವರ ಕ್ಷೇತ್ರದ ಪ್ರಮುಖರನ್ನು ಕಾಂಗ್ರೆಸ್ ಗೆ ಸೆಳೆಯಲಾಗುತ್ತಿದೆ.


Spread the love