ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವ್ಯಾಪಾರೋದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲಿದ್ದಾರೆ, ಭಾರತದಲ್ಲಿ ವೋಡ್ಕಾ ಬ್ರಾಂಡ್ ಪ್ರಾರಂಭಿಸಲು ವಿಶ್ವದ ಅತಿದೊಡ್ಡ ಬ್ರೂವರ್ ನೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ.
ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ ಆರ್ಯನ್ ಖಾನ್ ಈಗ ವ್ಯಾಪಾರ ಜಗತ್ತಿನಲ್ಲಿ ತಮ್ಮ ಮೊದಲ ಪ್ರವೇಶ ಘೋಷಿಸಿದ್ದಾರೆ.
25 ವರ್ಷ ವಯಸ್ಸಿನ ಅವರು ತಮ್ಮ ಪಾಲುದಾರರೊಂದಿಗೆ ಭಾರತದಲ್ಲಿ ಪ್ರೀಮಿಯಂ ವೋಡ್ಕಾ ಬ್ರ್ಯಾಂಡ್ ಅನ್ನು ಪ್ರಾರಂಭಿಸಲು ಯೋಜಿಸುತ್ತಿದ್ದಾರೆ. ಇದಕ್ಕಾಗಿ ಅವರು ವಿಶ್ವದ ಅತಿದೊಡ್ಡ ಬ್ರೂಯಿಂಗ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಆರ್ಯನ್ ಮತ್ತು ಅವರ ಇಬ್ಬರು ಪಾಲುದಾರರು – ಬಂಟಿ ಸಿಂಗ್ ಮತ್ತು ಲೆಟಿ ಬ್ಲಾಗೋವಾ – ಪ್ರೀಮಿಯಂ ವೋಡ್ಕಾ ಬ್ರ್ಯಾಂಡ್ ಅನ್ನು ಪ್ರಾರಂಭಿಸಲು ಮತ್ತು ನಂತರ ಬ್ರೌನ್ ಸ್ಪಿರಿಟ್ಸ್ ಮಾರುಕಟ್ಟೆಗೆ ವಿಸ್ತರಿಸಲು ಯೋಜಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇದಕ್ಕಾಗಿ ಅವರು ಸ್ಲ್ಯಾಬ್ ವೆಂಚರ್ಸ್ ಎಂಬ ಕಂಪನಿಯನ್ನು ಪ್ರಾರಂಭಿಸಿದ್ದಾರೆ, ಇದು ವಿತರಣೆ ಮತ್ತು ಮಾರುಕಟ್ಟೆ ಉದ್ದೇಶಗಳಿಗಾಗಿ ವಿಶ್ವದ ಅತಿದೊಡ್ಡ ಬ್ರೂವರ್ ಆದ Anheuser-Busch InBev (AB InBev) ನ ಸ್ಥಳೀಯ ಅಂಗದೊಂದಿಗೆ ಪಾಲುದಾರಿಕೆ ಹೊಂದಿದೆ.
ಸ್ಲ್ಯಾಬ್ ವೆಂಚರ್ಸ್ ದೇಶದ ಹೆಚ್ಚು ಶ್ರೀಮಂತ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಮತ್ತು ಆಲ್ಕೊಹಾಲ್ ಯುಕ್ತ ಮತ್ತು ಆಲ್ಕೊಹಾಲ್ ಯುಕ್ತವಲ್ಲದ ಪಾನೀಯಗಳು, ಉಡುಪುಗಳು ಮತ್ತು ಪರಿಕರಗಳು ಸೇರಿದಂತೆ ಇತರ ಪ್ರೀಮಿಯಂ ಗ್ರಾಹಕ ವಿಭಾಗಗಳೊಂದಿಗೆ ಮತ್ತಷ್ಟು ವೈವಿಧ್ಯಗೊಳಿಸಲು ಯೋಜಿಸಿದೆ ಎಂದು ಆರ್ಯನ್ ಖಾನ್ ಹೇಳಿದ್ದಾರೆ.