Spread the love

ಮೈಸೂರು: ಜೆಡಿಎಸ್ ತೊರೆದು ಬಿಜೆಪಿ ಸೇರಲು ಬಿ.ವೈ. ವಿಜಯೇಂದ್ರ ನನಗೆ ಹಣದ ಆಮಿಷವೊಡ್ಡಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಹಣದ ಆಮಿಷವೊಒಡ್ಡಿದ ವೇಳೆ ಯಡಿಯೂರಪ್ಪ, ಶ್ರೀನಿವಾಸ ಪ್ರಸಾದ್, ರಮೇಶ ಜಾರಕಿಹೊಳಿ ಕೂಡ ಇದ್ದರು ಎಂದು ತಿಳಿಸಿದ್ದಾರೆ.

 

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಶ್ರೀನಿವಾಸ ಪ್ರಸಾದ್ ನನ್ನನ್ನು ಕರೆಸಿಕೊಂಡಿದ್ದರು. ಈ ಸಂದರ್ಭದಲ್ಲಿ ವಿಜಯೇಂದ್ರ ಬಿಜೆಪಿ ಸೇರಲು ನನಗೆ ಹಣದ ಆಮಿಷವೊಡ್ಡಿದ್ದರು. ಇದಕ್ಕೆ ಯಡಿಯೂರಪ್ಪ, ಶ್ರೀನಿವಾಸ ಪ್ರಸಾದ್, ರಮೇಶ ಜಾರಕಿಹೊಳಿ ಅವರೇ ಸಾಕ್ಷಿ ಎಂದು ವಿಶ್ವನಾಥ್ ತಿಳಿಸಿದ್ದಾರೆ.

ಹಣ ಸ್ವೀಕರಿಸಿದ್ರಾ ಎಂಬ ಪ್ರಶ್ನೆಗೆ ಸೂಕ್ತ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಈ ಕುರಿತಾಗಿ ‘ಬಾಂಬೆ ಡೈರೀಸ್’ ಪುಸ್ತಕ ನೋಡಿ ಅದರ ಮೊದಲ ಅಧ್ಯಾಯದಲ್ಲೇ ಈ ವಿಚಾರವಿದೆ ಎಂದು ಕುತೂಹಲ ಮೂಡಿಸಿದ್ದಾರೆ.


Spread the love