ಬೆಂಗಳೂರು: ಕಳೆದ 2 ವರ್ಷದ ಬಳಿಕ ಅದ್ಧೂರಿಯಾಗಿ ಹೊಸ ವರ್ಷ ಆಚರಣೆಗೆ ಸಿದ್ಧತೆ ನಡೆಯುತ್ತಿದ್ದು ಮಧ್ಯರಾತ್ರಿ 3 ಗಂಟೆವರೆಗೂ ಹೋಟೆಲ್ ತೆರೆಯಲು ಅನುಮತಿ ಕೊಡಿ ಎಂದು ಬೆಂಗಳೂರು ಪೊಲೀಸ್ ಇಲಾಖೆಗೆ ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ. ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇವೆ.
ಕೊರೊನಾದಿಂದಾಗಿ ಕಳೆದ ಎರಡು ವರ್ಷದಿಂದ ಭರ್ಜರಿಯಾಗಿ ಆಚರಣೆ ಮಾಡಲಾಗದಿದ್ದ ಹೊಸ ವರ್ಷವನ್ನು ಈ ಬಾರಿ ಅದ್ದೂರಿಯಾಗಿ ಮಾಡಬೇಕೆಂದು ಸಿದ್ದತೆಗಳು ಶುರುವಾಗಿವೆ.
ಕ್ರಿಸ್ಮಸ್, ಹೊಸ ವರ್ಷಕ್ಕೆ ಈಗಾಗಲೇ ಸಿದ್ಧತೆಗಳು ಶುರುವಾಗಿವೆ. ಮಾಲ್ಗಳಲ್ಲಿ ಕ್ರಿಸ್ಮಸ್ ಅಲಂಕಾರ ಜನರನ್ನು ಸೆಳೆಯುತ್ತಿವೆ. ಮತ್ತೊಂದೆಡೆ ಕೊರೊನಾದಿಂದ ಕಂಗಾಲಾಗಿದ್ದ ಹೋಟೆಲ್ ಮಾಲೀಕರು ಹೊಸ ವರ್ಷಕ್ಕೆ ಹಣ ಮಾಡಿಕೊಳ್ಳುವ ಪ್ಲಾನ್ನಲ್ಲಿದ್ದಾರೆ. 2 ವರ್ಷದ ಬಳಿಕ ಅದ್ಧೂರಿಯಾಗಿ ಹೊಸ ವರ್ಷ ಆಚರಣೆಗೆ ಸಿದ್ಧತೆ ನಡೆಯುತ್ತಿದ್ದು ಮಧ್ಯರಾತ್ರಿ 3 ಗಂಟೆವರೆಗೂ ಹೋಟೆಲ್ ತೆರೆಯಲು ಅನುಮತಿ ಕೊಡಿ ಎಂದು ಪೊಲೀಸ್ ಇಲಾಖೆಗೆ ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ. ರಾತ್ರಿ 3 ಗಂಟೆಯವರೆಗೆ ಹೋಟೆಲ್ ತೆರಯಲು ಅನುಮತಿ ಕೊಟ್ಟರೆ ನಮಗೆ ಅನುಕೂಲವಾಗುತ್ತೆ ಎಂದು ಮನವಿ ಮಾಡಿದ್ದಾರೆ.