ಧಾರವಾಡದ ರಂಗಾಯಣವು ಕರ್ನಾಟಕದ ರಂಗಭೂಮಿ ಇತಿಹಾಸದಲ್ಲೇ ಮೊದಲ ಬಾರಿಗೆ ವೀರ ರಾಣಿ ಕಿತ್ತೂರು ಚೆನ್ನಮ್ಮ ಎಂಬ ಮೆಗಾ ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಈ ನಾಟಕದಲ್ಲಿ ಟಿಪ್ಪು ಸುಲ್ತಾನ್ ಪಾತ್ರ ಬಂದಿದ್ದು ಯಾವುದೇ ವಿವಾದಕ್ಕೆ ಕಾರಣವಾಗುವುದಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ಕೊಟ್ಟಿದ್ದಾರೆ..ಮೊದಲು ಮಾಧ್ಯಮಗಳಿಗೆ ಇದೊಂದು ಧರ್ಮ ದಂಗಲ್ ಗೆ ಕಾರಣವಾಗುತ್ತೆ ಎಂದಿದ್ದ ಮುತಾಲಿಕ್ ಇದೀಗ ತಮ್ಮ ಮಾತನ್ನ ಹಿಂಪಡೆದಿದ್ದಾರೆ .
ಬ್ರಿಟಿಷರ ವಿರುದ್ಧ ಇಡೀ ದೇಶದಲ್ಲೇ ಮೊಟ್ಟ ಮೊದಲು ಸ್ವಾತಂತ್ರ್ಯ ಸಂಗ್ರಾಮ ಆರಂಭಿಸಿ, ಬ್ರಿಟಿಷರಿಗೆ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದ್ದು ನಮ್ಮದೇ ನಾಡಿನ ಕಿತ್ತೂರ ಸಂಸ್ಥಾನ. ಈ ಸಂಸ್ಥಾನದ ವೀರರಾಣಿ ಕಿತ್ತೂರು ಚನ್ನಮ್ಮನ ಜೀವನವನ್ನೇ ಆಧರಿಸಿ ಧಾರವಾಡದ ರಂಗಾಯಣ ಮೆಗಾ ನಾಟಕವೊಂದನ್ನು ತಯಾರಿಸಿದ್ದು, ಡಿ. 24ರಂದು ಧಾರವಾಡದ ಕೆಸಿಡಿ ಮೈದಾನದಲ್ಲಿ ಮೊದಲ ಪ್ರದರ್ಶನ ಏರ್ಪಡಿಸಲಾಗಿದ್ದು, ಇದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಏಕಕಾಲಕ್ಕೆ ಹದಿನೈದು ಸಾವಿರ ಜನ ನೋಡಲಿರೋ ಈ ನಾಟಕ ಬೃಹತ್ ವೇದಿಕೆಯಲ್ಲಿ ನಡೆಯಲಿದೆ.
ಅದರಲ್ಲಿಯೂ 250 ಕಲಾವಿದರು ಇದರಲ್ಲಿದ್ದು ಜೀವಂತ ಆನೆ, ಕುದುರೆ, ಒಂಟೆಗಳನ್ನು ಬಳಿಸಿ ಯುದ್ದದ ಸನ್ನಿವೇಶಗಳನ್ನೂ ಪ್ರಸ್ತುತಪಡಿಸಲಿದ್ದಾರೆ. ಕರ್ನಾಟಕ ರಂಗಭೂಮಿ ಇತಿಹಾಸದಲ್ಲಿಯೇ ಮೊದಲು ಎನ್ನಲಾಗುವ ಈ ಚನ್ನಮ್ಮಾಜಿ ನಾಟಕದಲ್ಲಿ ಟಿಪ್ಪು ಇತಿಹಾಸವೂ ನುಸುಳಲಿದೆಯಂತೆ. ಕಿತ್ತೂರು ಸಂಸ್ಥಾನಕ್ಕೂ ಟಿಪ್ಪುವಿಗೂ ಸಂಬಂಧವೇ ಇಲ್ಲ. ಆದರೂ ಅದನ್ನು ನಾಟಕದಲ್ಲಿ ತೋರಿಸುವ ಅಗತ್ಯ ಯಾಕೆ? ಎನ್ನುವ ಪ್ರಶ್ನೆ ಉದ್ಭವಿಸಿದೆ. ಆದರೆ ನೈಜ ಇತಿಹಾಸ ಏನಿದೆಯೋ ಅದನ್ನು ನಾವು ತೋರಿಸೊಕೆ ಹೊರಟಿದ್ದೇವೆ. ಟಿಪ್ಪು ಸುಲ್ತಾನ್ ಪಾತ್ರ ನಾಟಕದಲ್ಲಿ ಇರುತ್ತೆ. ಆದರೆ ಅದು ಯಾವ ಸಮುದಾಯಕ್ಕೂ ಧಕ್ಕೆ ಬರದಂತೆ ಇರಲಿದೆ ಅಂತಾ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ ಸ್ಪಷ್ಟಪಡಿಸಿದ್ದಾರೆ..