Spread the love

ರಡು ಬಾರಿಯ ವಿಶ್ವಕಪ್‌ ಚಾಂಪಿಯನ್‌ ಅರ್ಜೆಂಟೀನಾ ತಂಡವನ್ನು 2022ರ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಮುನ್ನಡೆಸುತ್ತಿರುವ ದಿಗ್ಗಜ ಆಟಗಾರ ಲಿಯೋನೆಲ್‌ ಮೆಸ್ಸಿ, ಸಾಕಷ್ಟು ವಿಶ್ವದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ. ಫೈನಲ್‌ ಪಂದ್ಯದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಗೋಲು ಬಾರಿಸುವ ಮೂಲಕ ಜರ್ಮನಿಯ ದಿಗ್ಗಜ ಲೋಥರ್‌ ಮಥಾಸ್‌ ಅವರ ಬೃಹತ್‌ ದಾಖಲೆಯನ್ನು ಮೆಸ್ಸಿ ಮುರಿದಿದ್ದಾರೆ.

ಲೌಸೇಲ್‌ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್‌ ಫ್ರಾನ್ಸ್‌ ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ ತಂಡದ ಹಾಗೂ ಪಂದ್ಯದ ಮೊದಲ ಗೋಲು ಸಿಡಿಸುವ ಮೂಲಕ ಮೆಸ್ಸಿ ಅಪರೂಪದ ವಿಶ್ವದಾಖಲೆಯನ್ನು ಬರೆದಿದ್ದಾರೆ.

ಫಿಫಾ ವಿಶ್ವಕಪ್‌ನ ಐದು ಆವೃತ್ತಿಗಳಲ್ಲಿ ಆಡಿದ ಕೇವಲ ಆರು ಪುರುಷ ಆಟಗಾರರಲ್ಲಿ ಒಬ್ಬರಾದ ಅರ್ಜೆಂಟೀನಾ ನಾಯಕ ಮೆಸ್ಸಿ ವಿಶ್ವಕಪ್‌ನ ತಮ್ಮ 26ನೇ ಪಂದ್ಯದಲ್ಲಿ ಅಭೂತಪೂರ್ವ ದಾಖಲೆಯನ್ನು ಮಾಡಿದ್ದಾರೆ. 35 ವರ್ಷದ ಲಿಯೋನೆಲ್‌ ಮೆಸ್ಸಿ, ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ಅತಿಹೆಚ್ಚು ಪಂದ್ಯವಾಡಿದ ಆಟಗಾರ ಎನಿಸಿಕೊಂಡಿದ್ದಾರೆ. ಆ ಮೂಲಕ ಜರ್ಮನಿಯ ಮತ್ತೊಬ್ಬ ದಿಗ್ಗಜ ತಾರೆ ಮ್ಯಾಥೌಸ್ ಅವರ ವಿಶ್ವದಾಖಲೆಯನ್ನು ಮೆಸ್ಸಿ ಮುರಿದಿದ್ದಾರೆ. ಕ್ರೊವೇಷಿಯಾ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ 3-0 ಗೆಲುವು ಕಂಡಿತ್ತು. 35 ವರ್ಷದ ಲಿಯೋನೆಲ್‌ ಮೆಸ್ಸಿ ಆ ಪಂದ್ಯದಲ್ಲಿ ಅರ್ಜೆಂಟೀನಾ ಪರವಾಗಿ ವಿಶ್ವಕಪ್‌ನಲ್ಲಿ ತಮ್ಮ 11ನೇ ಗೋಲು ದಾಖಲು ಮಾಡಿದ್ದರು.

ಆ ಮೂಲಕ ಬಟಿಸ್ಟುಟಾ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಬಟಿಸ್ಟುಟಾ ಕೂಡ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಪರವಾಗಿ 11 ಗೋಲು ಬಾರಿಸಿದ್ದಾರೆ. ವಿಶ್ವದ ಅತ್ಯಂತ ಜನಪ್ರಿಯ ಟೂರ್ನಿಯಲ್ಲಿ ಅರ್ಜೆಂಟೀನಾದ ದಿಗ್ಗಜ ಗ್ಯಾಬ್ರಿಯೆಲ್‌ ಬಟಿಸ್ಟುಟಾಗಿಂತ ಹೆಚ್ಚಿನ ಪಂದ್ಯಗಳನ್ನು ಯಾರೂ ಕೂಡ ಆಡಿರಲಿಲ್ಲ. ಆದರೆ, ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ 7 ಬಾರಿಯ ಬ್ಯಾಲನ್‌ ಡಿ ಓರ್‌ ವಿಜೇತ ಲಿಯೋನೆಲ್‌ ಮೆಸ್ಸಿ ಈ ದಾಖಲೆಯನ್ನು ಮುರಿದಿದ್ದಾರೆ. ಸೆಮಿಫೈನಲ್‌ ಪಂದ್ಯದ ವೇಳೆ ಬಟಿಸ್ಟುಟಾ ಅವರ ದಾಖಲೆಯನ್ನು ಮೆಸ್ಸಿ ಮುರಿದಿದ್ದರು.

ಇದರೊಂದಿಗೆ ಫಿಫಾ ವಿಶ್ವಕಪ್‌ನಲ್ಲಿ ಗರಿಷ್ಠ ನಿಮಿಷಗಳ ಕಾಲ ಮೈದಾನದಲ್ಲಿದ್ದ ದಾಖಲೆಯನ್ನು ಮೆಸ್ಸಿ ಮಾಡಿದ್ದಾರೆ. ಆ ಮೂಲಕ ಮೆಸ್ಸಿ ಇಟಲಿಯ ದಿಗ್ಗಜ ಪಾವ್ಲೋ ಮಾಲ್ಡಿನಿಯ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಫಿಫಾ ವಿಶ್ವಕಪ್‌ನಲ್ಲಿ ಮಾಲ್ಡಿನಿ 2217 ನಿಮಿಷಗಳ ಕಾಲ ಮೈದಾನದಲ್ಲಿದ್ದರು. ಫಿಫಾ ವಿಶ್ವಕಪ್‌ ಫೈನಲ್‌ ಮೊದಲ ಅವಧಿ ಪೂರ್ತಿ ಮೈದಾನದಲ್ಲಿ ಕಳೆಯುವ ಮೂಲಕ ಈ ವಿಶ್ವದಾಖಲೆಯನ್ನೂ ಮೆಸ್ಸಿ ಮುರಿದಿದ್ದಾರೆ. 2006ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿದ್ದ ಮೆಸ್ಸಿ, ಈವರೆಗೂ 19 ಪಂದ್ಯಗಳಲ್ಲಿ ನಾಯಕರಾಗಿ ಆಡಿದ್ದಾರೆ.


Spread the love

By admin