Spread the love

ಗಾಂಡಾ: ಸುಮಾರು ಎರಡು ವರ್ಷಗಳ ಬಾಲಕನನ್ನು ಕಾಡು ಹಿಪ್ಪೋ ಸಂಪೂರ್ಣವಾಗಿ ನುಂಗಿರುವ ಭಯಾನಕ ಘಟನೆ ಉಗಾಂಡಾದಲ್ಲಿ ನಡೆದಿದೆ.

ಹುಡುಗನನ್ನು ನುಂಗಿದ ನಂತರ, ಅವನನ್ನು ಮತ್ತೆ ಉಗುಳಿದ್ದು, ಬಾಲಕ ಪವಾಡಸದೃಶವಾಗಿ ಬದುಕಿ ಉಳಿದಿದ್ದಾನೆ.

 

‘ಪಾಲ್ ಇಗಾ ಎಂಬ ಪುಟ್ಟ ಮಗುವಿನ ಭಯಾನಕ ಘಟನೆ ಇದಾಗಿದೆ. ಬಾಲಕ ಪಾಲ್ ಭಾನುವಾರ ಕಟ್ವೆ ಕಬಟೊರೊದ ಎಡ್ವರ್ಡ್ ಸರೋವರದ ದಡದಿಂದ ಸುಮಾರು 800 ಗಜಗಳಷ್ಟು ದೂರದ ತನ್ನ ಮನೆಯ ಬಳಿ ಆಟವಾಡುತ್ತಿದ್ದನು.

ಇದ್ದಕ್ಕಿದ್ದಂತೆ, ಹಿಪ್ಪೋ ಕಾಣಿಸಿಕೊಂಡಿದೆ. ಮಗುವನ್ನು ತನ್ನ ದವಡೆಯಲ್ಲಿ ಹಿಡಿದುಕೊಂಡಿದೆ. ಅಷ್ಟರಲ್ಲಿ ಅದನ್ನು ನೋಡಿದ ಒಬ್ಬ ವ್ಯಕ್ತಿ ಪ್ರಾಣಿಯನ್ನು ಕಲ್ಲುಗಳಿಂದ ಹೊಡೆಯಲು ಪ್ರಾರಂಭಿಸಿದ್ದಾನೆ. ಅಷ್ಟರಲ್ಲಿಯೇ ಅದು ಬಾಲಕನನ್ನು ನುಂಗಿತ್ತು. ಕಲ್ಲು ಹೊಡೆತದಿಂದ ಕಂಗೆಟ್ಟ ಅದು ಬಾಲಕನನ್ನು ಪುನಃ ಉಗುಳಿದೆ. ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುನ್ನೆಚ್ಚರಿಕೆಯಾಗಿ ರೇಬಿಸ್‌ಗೆ ಲಸಿಕೆ ನೀಡಲಾಗಿದೆ.


Spread the love

By admin