Spread the love

ಮುಂಬೈ: ನಟರಾದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಹೊಸ ಚಿತ್ರ ‘ಪಠಾಣ್’ ವಿರುದ್ಧ ಅನೇಕ ರಾಜಕೀಯ ನಾಯಕರು ಮಾತನಾಡುವುದನ್ನು ಮುಂದುವರಿಸುತ್ತಿದ್ದಂತೆ, ಬಾಲಿವುಡ್ ನಟ ಅಮಿತಾಭ್​ ಬಚ್ಚನ್ ಈಗ ತಮ್ಮ “ಅಭಿವ್ಯಕ್ತಿ ಸ್ವಾತಂತ್ರ್ಯ” ಭಾಷಣದ ಬಗ್ಗೆ ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ.

 

ಪಠಾಣ್‌ನನ್ನು ಬಹಿಷ್ಕರಿಸುವ ಕರೆಗಳ ನಂತರ, ಬಾಲಿವುಡ್ ನಟ ಅಮಿತಾಭ್​ ಬಚ್ಚನ್ ಕೋಲ್ಕತಾ ಚಲನಚಿತ್ರೋತ್ಸವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಕುರಿತು ಮಾತನಾಡಿದ್ದು, ಇದು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ.

ಪಠಾಣ್ ವಿರುದ್ಧದ ಗದ್ದಲದ ಹಿನ್ನೆಲೆಯಲ್ಲಿ ಬಚ್ಚನ್ ಹೇಳಿಕೆ ನೀಡಿದ್ದು, “ಈಗಲೂ, ನಾಗರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ” ಎಂದು ಹೇಳಿದ್ದಾರೆ.

ಬಿಜೆಪಿ ಇದರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆಯೇ ಅಮಿತಾಭ್​ ಪರವಾಗಿ ಟಿಎಂಸಿ ನಿಂತಿದೆ. ಅಮಿತಾಭ್​ ಅವರ ಸಮರ್ಥನೆಗೆ ಬಂದ ಟಿಎಂಸಿ ನಾಯಕಿ ನುಸ್ರತ್ ಜಹಾನ್, “ನಿರಂಕುಶ ಆಡಳಿತದ ಚಿಹ್ನೆಗಳು ಚಲನಚಿತ್ರಗಳನ್ನು ನಿಷೇಧಿಸುವುದು, ಪತ್ರಕರ್ತರನ್ನು ಬಂಧಿಸುವುದು ಮತ್ತು ಸತ್ಯವನ್ನು ಮಾತನಾಡುವ ಸಾಮಾನ್ಯ ಜನರನ್ನು ಶಿಕ್ಷಿಸುವುದು ಸೇರಿವೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಚ್ಚುವುದು ಎಂದರೆ ಅಷ್ಟೇ ಎಂದಿದ್ದಾರೆ.


Spread the love