Spread the love

ಪ್ರಸ್ತುತ ದಿನಗಳಲ್ಲಿ ಪೋಕ್ಸೋ ಸೇರಿದಂತೆ ಹಲವು ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಮಠಾಧೀಶರ ಹಕ್ಕಿಗೆ ಚ್ಯುತಿ ಉಂಟು ಮಾಡಲಾಗುತ್ತಿದೆ. ಹೀಗಾಗಿ ಮಠಾಧೀಶರ ರಕ್ಷಣೆಗೆ ಸರ್ಕಾರ ಸೂಕ್ತ ಕಾಯ್ದೆ ರೂಪಿಸಬೇಕು ಎಂದು ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿಯಾಗಿದ್ದ ಬಸವಪ್ರಭು ಸ್ವಾಮೀಜಿ ಒತ್ತಾಯಿಸಿದ್ದಾರೆ.

 

ಮಂಗಳವಾರದಂದು ಮುರುಘಾ ಮಠದಲ್ಲಿ ನಡೆಸಲಾದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯ್ದೆ ಮೂಲಕ ಮಠಾಧೀಶರ ರಕ್ಷಣೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಯಾರೂ ಸಹ ಮಠಾಧೀಶರ ಪಟ್ಟಕ್ಕೆ ಏರಲು ಬಯಸುವುದಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಚಿತ್ರದುರ್ಗ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿರುವ ಕುರಿತಂತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಹಿಂದೆ ರಾಮಚಂದ್ರಾ ಪುರ ಮಠ ಸಹ ಇಂತವುದೇ ಪರಿಸ್ಥಿತಿ ಎದುರಿಸಿತ್ತು. ಆದರೆ ಆಗ ಆಡಳಿತಾಧಿಕಾರಿ ನೇಮಕ ಮಾಡದ ಸರ್ಕಾರ ಮುರುಘಾ ಮಠದ ವಿಷಯದಲ್ಲಿ ಭಿನ್ನ ನಿಲವು ತೆಗೆದುಕೊಂಡಿದೆ ಎಂದರು.


Spread the love