Spread the love

ನ್ಯಾಯಬೆಲೆ ಅಂಗಡಿ ಮತ್ತು ಸಹಕಾರ ಸಂಘಗಳಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ವಿತರಿಸಲಾಗುತ್ತಿದ್ದು, ಇದರಲ್ಲಿ ಬಿಳಿ ಬಣ್ಣದ ಗೋಧಿ ಆಕಾರದ ಅಕ್ಕಿ ಕಂಡುಬಂದಿತ್ತು. ಹೀಗಾಗಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ಮಾಡಿ ವಿತರಿಸಲಾಗುತ್ತಿದೆ ಎಂದು ಪಡಿತರ ಚೀಟಿದಾರರು ಆತಂಕ ವ್ಯಕ್ತಪಡಿಸಿದ್ದರು.

 

ಆದರೆ ಉಚಿತ ಅಕ್ಕಿಯಲ್ಲಿ ಸಿಗುತ್ತಿರುವ ಬಿಳಿ ಬಣ್ಣದ ಗೋಧಿ ಆಕಾರದ ಅಕ್ಕಿಯು ಸಾರವರ್ಧಿತ ಪೋಷಕಾಂಶ ಹೊಂದಿದ ಅಕ್ಕಿಯಾಗಿದೆ ಎಂದು ಸ್ಪಷ್ಟನೆ ನೀಡಲಾಗಿದೆ. 1 ಕ್ವಿಂಟಾಲ್ ಗೆ ಒಂದು ಕೆಜಿ ಸಾರವರ್ಧಿತ ಅಕ್ಕಿಯನ್ನು ಮಿಶ್ರಣ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಸಾರವರ್ಧಿತ ಅಕ್ಕಿಯು ಗರ್ಭಿಣಿಯರು, ರಕ್ತ ಹೀನತೆಯುಳ್ಳವರ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದ್ದು, ಭ್ರೂಣದಲ್ಲಿ ಮಗುವಿಗೆ ಶಕ್ತಿ ನೀಡಲು ಈ ಅಕ್ಕಿ ನೆರವಾಗುತ್ತದೆ ಎಂದು ಮೂಲಗಳು ಹೇಳಿವೆ.

ಕಳೆದ ಒಂದೂವರೆ ವರ್ಷದಿಂದ ಪಡಿತರ ಅಕ್ಕಿಯಲ್ಲಿ ಸಾರವರ್ಧಿತ ಅಕ್ಕಿಯನ್ನು ಮಿಶ್ರಣ ಮಾಡಿ ವಿತರಿಸಲಾಗುತ್ತಿದ್ದು, ಇದು ಪೋಷಕಾಂಶ ಹೊಂದಿರುವ ಅಕ್ಕಿಯಾಗಿರುವ ಕಾರಣ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಎಂದು ತಿಳಿದು ಬಂದಿದೆ.


Spread the love