ತುಮಕೂರು ಜಿಲ್ಲೆ ( ಪಾವಗಡ ): ಗ್ರಾಮೀಣಾ ಭಾಗದ ರೈತರು ಮಹಾತ್ಮ ಗಾಂಧಿಯೋಜನೆಯಲ್ಲಿ ಬರುವ ಹಲವಾರು ರೈತ ಸ್ನೇಹಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸ್ವಾಭಿಮಾನಿ ಗಳಾಗ ಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ವತಿಯಿಂದು ಇಂದು ವಿರುಪ ಸಮುದ್ರ ಗ್ರಾಮ ಪಂಚಾಯತಿ ಗೌಡೇಟಿ ಗ್ರಾಮದ ಅಮೃತ ಸರೋವರ ಕಾಮಗಾರಿ ಬಳಿ ರಾಷ್ಟ್ರೀಯ ರೈತ ದಿನ(ಕಿಸಾನ್ ದಿವಸ್) ಆಯೋಜಿಸಿರುವ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ತಮ್ಮ ತೋಟಗಳಲ್ಲಿ ಕೆಲಸ ಮಾಡಲು ನರೇಗಾ ಯೋಜನೆಯಲ್ಲಿ ಅನುದಾನ ನೀಡುತ್ತದೆ ಎಲ್ಲ ರೈತ ಬಾಂಧವರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದರು.
ನಂತರ ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ರಂಗನಾಥ ರವರು ಮಾತನಾಡಿ,
ಸ್ವತಂತ್ರ ಬಂದು ಇಂದು 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರವು ಅಮೃತ ಸರೋವರಗಳನ್ನು ನಿರ್ಮಾಣ ಮಾಡುತ್ತಿದೆ. ಈ ಅಮೃತ ಸರೋವರಗಳ ನಿರ್ಮಾಣದಿಂದಾಗಿ ಅಂತರ್ಜಲ ಮಟ್ಟವನ್ನು ಹೆಚ್ಚಸಬಹುದು,ಜೋತೆ ಪ್ರಾಣಿ ಪಕ್ಷಿಕಗಳ ನೀರಿನ ದಾಹವನ್ನು ತೀರಿಸಬಹುದಾಗಿದೆ ಎಂದರು. ನಂತರ ಅದರ ಸುತ್ತಲೂ ಹಲಸು, ಹಣ್ಣಿನ ಸಸ್ಯಗಳನ್ನು ಹಾಕು ಮೂಲಕ ಪ್ರಾಣಿಗಳಿಗೆ ಆಹಾರವನ್ನು ನೀಡಿದಂತಾಗುತ್ತದೆ ಎಂದರು.
ನಂತರ ಐಇಸಿ ಸಂಯೋಜಕರಾದ ಶ್ರೀಕಾಂತ್ ಮಾತನಾಡಿ ಮನರೇಗಾ ಯೋಜನೆಯಲ್ಲಿ ಗಂಡು ಹೆಣ್ಣಿಗೂ ಸಮಾನ ವೇತನ ಒಂದು ದಿನಕ್ಕೆ ರೂ.309 ನೀಡಲಿದೆ. ಗ್ರಾಮೀಣಾ ಭಾಗದಲ್ಲಿರುವ ನಿರುದ್ಯೋಗಿಗಳು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದರು.
ನಂತರ ರೈತರೊಂದಿಗೆ ಲಘು ಉಪಹಾರವನ್ನು ಸೇವಿಸಲಾಯಿತು.
ಈ ವೇಳೆ ಗ್ರಾಮಪಂಚಾಯಿತಿ
ಅಧ್ಯಕ್ಷರಾದ ಶಾರದಮ್ಮ ಪಾಂಡಪ್ಪ, ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ಚಿಕ್ಕಣ್ಣ, ರಂಗಧಾಮಪ್ಪ, ಗ್ರಾಮಪಂಚಾಯಿತಿ ಸಿಬ್ಬಂದಿ, ತಾಂತ್ರಿಕ ಸಹಾಯಕರಾದ ವೀಣಾ ಈ ಭಾಗದ ರೈತರು, ಸಾರ್ವಜನಿಕರು ಹಾಜರಿದ್ದರು.
ವರದಿ : ಅಜಿತ್ ಕುಮಾರ್ ಬೆಳ್ಳಿಬಟ್ಲು ಓ