ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಚಿತ್ರರಂಗದಿಂದ ದೂರವಾಗಲಿದ್ದಾರಾ? ಹೀಗೊಂದು ಮಾತು ಕೇಳಿಬರ್ತಿದೆ.
ತೆಲುಗು ಸೆನ್ಸೇಷನ್ ಸಮಂತಾ ರುತ್ ಪ್ರಭು ಅವರು ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದಾಗಿನಿಂದ ಹೆಚ್ಚು ಸಕ್ರಿಯವಾಗಿಲ್ಲ.
ನಟಿ ತನ್ನ ಆರೋಗ್ಯದ ಕಾರಣದಿಂದ ಇತ್ತೀಚಿಗೆ ಬಿಡುಗಡೆಯಾದ ಅವರ ಯಶೋದಾ ಚಿತ್ರದ ಪ್ರಚಾರ ಕೂಡ ಮಾಡಲಿಲ್ಲ. ಇದೀಗ ಸಿಕ್ಕಿರುವ ಅಪ್ ಡೇಟ್ ಮಾಹಿತಿಯೆಂದರೆ ಸಮಂತಾ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ನಟನೆಯಿಂದ ದೀರ್ಘ ವಿರಾಮವನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದಾರೆ.
ತನ್ನ ಹಿಂದಿ ವೆಬ್ ಚೊಚ್ಚಲ ದಿ ಫ್ಯಾಮಿಲಿ ಸೀಸನ್ 2 ರ ಭಾರೀ ಯಶಸ್ಸಿನ ನಂತರ ಸಮಂತಾ ಒಂದೆರಡು ಬಾಲಿವುಡ್ ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಆದರೆ ತನಗೆ ದೀರ್ಘ ವಿರಾಮದ ಅಗತ್ಯವಿದೆ ಎಂದು ಸಮಂತಾ ಚಿತ್ರ ನಿರ್ಮಾಪಕರಿಗೆ ತಿಳಿಸಿದ್ದಾರೆ. ಹೀಗಾಗಿ ಚಿತ್ರ ನಿರ್ಮಾಪಕರು ಹೊಸ ಆಯ್ಕೆಯತ್ತ ಚಿಂತಿತರಾಗಿದ್ದಾರೆನ್ನಲಾಗಿದೆ.
ಸದ್ಯ ವಿಜಯ್ ದೇವರಕೊಂಡ ಅಭಿನಯದ ಕುಶಿ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಲು ಸಮಂತಾ ಉತ್ಸುಕರಾಗಿದ್ದಾರೆ. ನಂತರ ಸಮಂತಾ ಚಲನಚಿತ್ರಗಳಿಂದ ದೂರವಿರಲು ಯೋಜಿಸಿದ್ದಾರೆ.