Spread the love

ಫ್ರಾನ್ಸ್‌ ನ ರಾಜಧಾನಿ ಪ್ಯಾರಿಸ್‌ನಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ಯಾರಿಸ್‌ನ 10ನೇ ಅರೋಂಡಿಸ್‌ಮೆಂಟ್‌ನಲ್ಲಿರುವ ರೂ ಡಿ ಎಂಘಿಯನ್‌ನಲ್ಲಿರುವ ಕುರ್ದಿಶ್ ಸಾಂಸ್ಕೃತಿಕ ಕೇಂದ್ರದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ.

 

ಪೊಲೀಸರು ಶಂಕಿತ ಬಂದೂಕುಧಾರಿಯನ್ನು ಬಂಧಿಸಿದ್ದಾರೆ. ಕೊಲೆಗಾರ 70 ವರ್ಷದವನಾಗಿದ್ದಾನೆ. ಶೂಟರ್ ನನ್ನು ಶಸ್ತ್ರಾಸ್ತ್ರ ಸಹಿತ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ಯಾರಿಸ್‌ನ ಗರೆ ಡು ನಾರ್ಡ್ ನಿಲ್ದಾಣದ ಸಮೀಪವಿರುವ ಸಮುದಾಯ ಕೇಂದ್ರಕ್ಕೆ ಗಾಯಾಳುಗಳನ್ನು ರವಾನಿಸಲಾಗಿದೆ. ಘಟನೆ ನಡೆದ ಪ್ರದೇಶ ಹಲವಾರು ಬ್ಯುಸಿ ಶಾಪಿಂಗ್ ಸ್ಟ್ರೀಟ್‌ಗಳಿಗೆ ಸಮೀಪದಲ್ಲಿದೆ.


Spread the love

By admin