Spread the love

ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ನಟಿ ಕತ್ರಿನಾ ಕೈಫ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ತನ್ನ ಇನ್ ಸ್ಟಾಗ್ರಾಂನಲ್ಲಿ ಸಲ್ಮಾನ್ ಖಾನ್ ಅವರ ಗ್ರೇಸ್ಕೇಲ್ ಚಿತ್ರವನ್ನು ಪೋಸ್ಟ್ ಮಾಡಿ, “ಟೈಗರ್, ಟೈಗರ್ ಟೈಗರ್ ಗೆ ಜನ್ಮದಿನದ ಶುಭಾಶಯಗಳು .

ಸಲ್ಮಾನ್ ಖಾನ್ OG.” ಎಂದು ಪೋಸ್ಟ್ ಮಾಡಿದ್ದಾರೆ.

ಸಲ್ಮಾನ್ ಖಾನ್ ರವರ ಮುಂಬರುವ ಟೈಗರ್ 3 ಚಿತ್ರದಲ್ಲಿ ಕತ್ರಿನಾ ಕೈಫ್ ತೆರೆ ಹಂಚಿಕೊಳ್ಳಲಿದ್ದಾರೆ. ಟೈಗರ್ 3, ಆಕ್ಷನ್ ಥ್ರಿಲ್ಲರ್ ಟೈಗರ್ ಸರಣಿಯ ಚಿತ್ರವಾಗಿದ್ದು ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಮನೀಶ್ ಶರ್ಮಾ ನಿರ್ದೇಶಿಸಲಿದ್ದು, ಯಶ್ ರಾಜ್ ಫಿಲಂಸ್ ನಿರ್ಮಾಣ ಮಾಡಲಿದೆ.

ಸಲ್ಮಾನ್ ಖಾನ್, ಕತ್ರಿನಾ ಕೈಫ್ ಅವರನ್ನು ಬಾಲಿವುಡ್‌ಗೆ ಪರಿಚಯಿಸಿದರು. ಅವರು ಕೆಲವು ವರ್ಷಗಳವರೆಗೆ ಡೇಟಿಂಗ್ ಮಾಡುತ್ತಿದ್ದರೆಂದು ಹೇಳಲಾಗಿತ್ತು.

ಇವರಿಬ್ಬರು ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ಮೈನೆ ಪ್ಯಾರ್ ಕ್ಯೂನ್ ಕಿಯಾ ಮತ್ತು ಪಾರ್ಟ್‌ನರ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್ ಕೂಡ ಕತ್ರಿನಾ ಅಭಿನಯದ ಹಲವಾರು ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇವರಿಬ್ಬರು ಕೊನೆಯದಾಗಿ 2019 ರ ಭಾರತ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅವರು ಮುಂದಿನ ಟೈಗರ್ 3 ನಲ್ಲಿ ಸಹ ನಟರಾಗಲಿದ್ದಾರೆ. ಕತ್ರಿನಾ ನಟ ವಿಕ್ಕಿ ಕೌಶಲ್ ರನ್ನು ಮದುವೆಯಾಗಿದ್ದು ದಾಂಪತ್ಯ ನಡೆಸುತ್ತಿದ್ದಾರೆ.


Spread the love

By admin